ಎನ್ಎಸ್ಎಸ್ ಶಿಬಿರ ನಾಳೆಯಿಂದ
ಮೈಸೂರು: ಕುವೆಂಪುನಗರದ ಸರ್ಕಾರಿ ಪಿಯು ಕಾಲೇಜಿನ ಎನ್ಎಸ್ಎಸ್ ಘಟಕವು ಅ.3ರಿಂದ 9ರವರೆಗೆ ನಗರದ ದಾಸನಕೊಪ್ಪಲಿನ ಸಮುದಾಯ ಭವನದಲ್ಲಿ ಎನ್ಎಸ್ಎಸ್ ವಾರ್ಷಿಕ ಶಿಬಿರ ಏರ್ಪಡಿಸಿದ್ದು, ಅ.3ರ ಸಂಜೆ 4ಕ್ಕೆ ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಧ್ವಜಾರೋಹಣ ನೆರವೇರಿಸುವರು.
ಅಭಿಜ್ಞಾನ ಉತ್ಸವ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿಯಲ್ಲಿ ಅ.5 ಮತ್ತು 6ರಂದು ಅಭಿಜ್ಞಾನ ನಿರ್ವಹಣಾ ಉತ್ಸವ ಏರ್ಪಡಿಸಿದ್ದು, ರಾಜ್ಯದ 130 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ವಿವಿಧ ಸ್ಪರ್ಧೆಗಳು ನಡೆಯಲಿವೆ. ಮೊ. 9742809443 ಸಂಪರ್ಕಿಸಿರಿ..
ಯೋಗಾಸನ
ಮೈಸೂರು: ಸಿದ್ದಾರ್ಥ ನಗರದ ಪತಂಜಲಿ ಯೋಗ ಶಿಕ್ಷಣ ವಿಶ್ವಸ್ಥ ಮಂಡಲಿಯಲ್ಲಿ ಅ.6ರಿಂದ 45 ದಿನಗಳ ಯೋಗಾಸನ, ಪ್ರಾಣಾಯಾಮ, ಧ್ಯಾನ ಉಚಿತ ತರಗತಿ ನಡೆಸಲಿದ್ದು, ಮೊ. 98455 81057 ಸಂಪರ್ಕಿಸಬಹುದು.
ವಿವಿಧ ತರಬೇತಿ
ಮೈಸೂರು: ಕುವೆಂಪುನಗರದ ಲಕ್ಷ್ಮೀ ಮಹಿಳಾ ಸಮಾಜವು ಮಹಿಳೆಯರಿಗಾಗಿ ವಿವಿಧ ತರಬೇತಿ ನೀಡಲಿದ್ದು, ಆಸಕ್ತರು ಮೊ. 93421 85749 ಸಂಪರ್ಕಿಸಬಹುದು. ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎಂಐಟಿ ಎಜುಕೇಷನ್ ಟ್ರಸ್ಟ್ ವತಿಯಿಂದ ಯುವಕ- ಯುವತಿಯರಿಗೆ 10 ದಿನಗಳ ಕಾಲ ಕಂಪ್ಯೂಟರ್ ಬೇಸಿಕ್ಸ್, ಟ್ಯಾಲಿ ತರಗತಿ ನಡೆಸಲಿದ್ದು, ಮೊ. 99640 01001 ಸಂಪರ್ಕಿಸಬಹುದು. ಟಿ.ಕೆ. ಲೇಔಟ್ನಲ್ಲಿರುವ ಅರೆನಾ ಅನಿಮೇಷನ್ ಸಂಸ್ಥೆಯು ಬಹುಮಾಧ್ಯಮ ತಂತ್ರಜ್ಞಾನ ಜಾಹಿರಾತು, ಐಟಿ, ಗೇಮಿಂಗ್, ಎಂಜಿನಿಯರಿಂಗ್, ಫ್ಯಾಷನ್ ಡಿಸೈನ್, ಜುವೆಲ್ಲರಿ ಡಿಸೈನ್ ಇತ್ಯಾದಿಗಳ ತರಬೇತಿ ನೀಡಲಿದ್ದು, ಶೇ.50ರಷ್ಟು ರಿಯಾಯಿತಿ ಶುಲ್ಕದೊಂದಿಗೆ ಅವಕಾಶ ಕಲ್ಪಿಸಲಾಗಿದೆ. ಮೊ. 99800 02248 ಸಂಪರ್ಕಿಸಬುಹುದು. ಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬ್ಯಾಂಕಿಂಗ್ ಹುದ್ದೆಗಳಿಗೆ ಉಚಿತ ತರಬೇತಿ ನೀಡಲಿದ್ದು, ದೂ. 0821- 2512065 ಸಂಪರ್ಕಿಸಬಹುದು. ಕೆ.ಆರ್. ವೃತ್ತದ ಬಳಿ ಇರುವ ಜಗಜ್ಯೋತಿ ಎಜುಕೇಷನ್ ಇನ್ಸ್ಟಿಟ್ಯೂಟ್ ವತಿಯಿಂದ ಐಬಿಪಿಎಸ್, ಕ್ಲರಿಕಲ್ ಹಾಗೂ ಪ್ರೋಬೇಷನರಿ ಆಫೀಸರ್ ಹುದ್ದೆಗಳಿಗೆ ಸಿಇಟಿ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದ್ದು, ಮೊ. 73530 90086 ಸಂಪರ್ಕಿಸಬಹುದು.