ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮೀಣ ದಸರೆಗೆ ತೆರೆ

Rashmi Kasaragodu
Updated On : 2 Oct 2013, 1:41 am

ಕ.ಪ್ರ.ವಾರ್ತೆ     ಎಚ್.ಡಿ.ಕೋಟೆ     ಅ. 1
ಪಟ್ಟಣದಲ್ಲಿ ಮಂಗಳವಾರ ಗ್ರಾಮೀಣ ದಸರಾ ವಿಜೃಂಭಣೆಯಿಂದ ನಡೆಯಿತು. ಜಿಪಂ ಹಾಗೂ ಗ್ರಾಮೀಣ ದಸರಾ ಸಮಿತಿ ಅಧ್ಯಕ್ಷ ಎಂ. ಮಹದೇವು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟ ಮೆರವಣಿಗೆಯು ಒಂದನೇ ಮುಖ್ಯ ರಸ್ತೆಯಿಂದ ಬಾಪೂಜಿ ವೃತ್ತ ಬಳಸಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು.
ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಸ್ತಬ್ಧಚಿತ್ರ, ಕಂಸಾಳೆ, ವೀರಗಾಸೆ, ನಂದಿಧ್ವಜ, ಡೊಳ್ಳು ಕುಣಿತ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆ ನಂತರ ಕಾಲೇಜು ಮೈದಾನದಲ್ಲಿ ನಡೆದ ವಸ್ತು ಪ್ರದರ್ಶನವನ್ನು ಶಾಸಕ ಎಸ್. ಚಿಕ್ಕಮಾದು, ಜಿಪಂ ಅಧ್ಯಕ್ಷ ಎಂ. ಮಹದೇವು, ಗ್ರಾಮೀಣ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೋಟೆಹುಂಡಿ ಮಹದೇವು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಂ. ಮಹದೇವು ಮಾತನಾಡಿ, ಗ್ರಾಮೀಣ ಕಲೆಗಳಾದ ಕುಸ್ತಿ ಪಂದ್ಯಾವಳಿ, ಕೋಲಾಟ, ಸೋಬಾನೆ ಪದ, ಮಹಿಳೆಯರಿಗಾಗಿ ಬೀಸುವ ಪದಗಳು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದಾಗಿದ್ದು, ಅವುಗಳು ನಶಿಸಿ ಹೋಗುತ್ತಿದೆ. ಆದ್ದರಿಂದ ಅವುಗಳು ನಾಶವಾಗದ ರೀತಿಯಲ್ಲಿ ಕಾಪಾಡಿಕೊಳ್ಳುವಂತೆ ಹೇಳಿದರು.
ಗ್ರಾಮೀಣ ದಸರಾದ ಕಾರ್ಯಾಧ್ಯಕ್ಷ ಕೋಟೆಹುಂಡಿ ಮಹದೇವು ಮಾತನಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇರಿಗೆ ಬಹುಮಾನ ವಿತರಿಸಲಾಯಿತು.
ಜಿಪಂ ಸದಸ್ಯರಾದ ಎಚ್.ಸಿ. ಮಂಜುನಾಥ್, ನಂದಿನಿ ಚಂದ್ರಶೇಖರ್, ಭಾಗ್ಯಲಕ್ಷ್ಮೀ ನಿಂಗರಾಜು, ಪದ್ಮಾ ಬಸವರಾಜು, ಚಿಕ್ಕಣ್ಣೇಗೌಡ, ತಾಪಂ ಅಧ್ಯಕ್ಷೆ ಲಕ್ಷ್ಮೀ ರಮೇಶ್, ಉಪಾಧ್ಯಕ್ಷ ಮಹೇಂದ್ರ, ಸರಗೂರು ಪಪಂ ಅಧ್ಯಕ್ಷೆ ಪದ್ಮ, ಗ್ರಾಮೀಣ ದಸರಾ ಉಪಾಧ್ಯಕ್ಷ ಸತ್ಯಾನಂದ, ಸದಸ್ಯ ಎನ್.ಡಿ. ಶಿವಣ್ಣ, ರವಿಚಂದ್ರ, ಮಾಜಿ ಜಿಪಂ ಸದಸ್ಯ ರವಿ, ಪಪಂ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ತಾಜ್, ತಹಸೀಲ್ದಾರ್ ಕೃಷ್ಣ, ಇಒ ಲಿಂಗರಾಜು, ಪುರದಕಟ್ಟೆ ಬಸವರಾಜು, ಸಿ.ವಿ. ನಾಗರಾಜು, ಎಂ.ಸಿ. ದೊಡ್ಡನಾಯಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ತಾಲೂಕು ಅಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.
ಇದರೊಂದಿಗೆ ಕಳೆದೊಂದು ವಾರದಿಂದ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನಡೆದ ಗ್ರಾಮೀಣ ದಸರೆಗೆ ತೆರೆ ಬಿದ್ದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement