ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾರಾಯಣ ಹೃದಯಾಲಯಕ್ಕೆ ಹೆಚ್ಚುವರಿ ಬಸ್ ಸೌಲಭ್ಯ

Rashmi Kasaragodu
Updated On : 2 Oct 2013, 1:40 am

ಕ.ಪ್ರ.ವಾರ್ತೆ     ಮೈಸೂರು     ಅ. 1
ನಗರದ ವರ್ತುಲ ರಸ್ತೆಯಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಶಾಸಕ ತನ್ವೀರ್ ಸೇಠ್ ನಗರ ಬಸ್ ರೂಟ್ ನಂ.200, 199, 178ಗಳ ಹೆಚ್ಚುವರಿ ರೂಟ್ಗಳಿಗೆ ಚಾಲನೆ ನೀಡಿದರು.
ಸರ್ಕಾರವು ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಂಡು, ಬಿಪಿಎಲ್ ಕಾರ್ಡ್, ಯಶಸ್ವಿನಿ ಕಾರ್ಡ್ಗಳನ್ನು ಹಾಜರುಪಡಿಸಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ಪಡೆಯುವಂತೆ ಅವರು ಕೋರಿದರು. ಈ ಆಸ್ಪತ್ರೆಯಿಂದ ಯಾದವಗಿರಿ, ಒಂಟಿಕೊಪ್ಪಲ್, ಹಿನಕಲ್ ಮತ್ತು ಇತರ ಕಡೆಗಳಿಗೆ ಹೆಚ್ಚುವರಿ ಬಸ್ ರೂಟ್ಗಳನ್ನು ಕಲ್ಪಿಸಲಾಗಿದೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ, ಡಾ. ವರದರಾಜ್, ಮಾರುಕಟ್ಟೆ ಮುಖ್ಯಸ್ಥ ಅಶೋಕ್, ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ನಿತಿನ್ ಮತ್ತು ಸಿಬ್ಬಂದಿ ವರ್ಗ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್, ವಿಭಾಗೀಯ ಸಂಚಾರಿ ಅಧಿಕಾರಿ ವಿ. ನಾಗರಾಜ್, ಸಹಾಯಕ ಸಂಚಾರಿ ವ್ಯವಸ್ಥಾಪಕ ಮಕ್ಸೂದ್, ನಗರ ಪಾಲಿಕೆ ಮಾಜಿ ಸದಸ್ಯ ಸೈಯದ್ ನೂರಲ್ಲಾ, ಅಯಾಜ್ ಪಾಷ, ನಗರಪಾಲಿಕೆ ಸದಸ್ಯ ಮುಮ್ತಾಜ್, ಅಹಮದ್, ಕೆಎಸ್ಆರ್ಟಿಸಿ ಯುನಿಯನ್ ಮುಖ್ಯಸ್ಥ ಶಫೀಕ್ ಭಾಗವಹಿಸಿದ್ದರು.
ನೂತನವಾಗಿ ಮಾರ್ಗ ಸಂಖ್ಯೆ 178ಎನ್ ಎಂಬ ಮೂರು ನೂತನ ಮಾರ್ಗಗಳನ್ನು ನಗರ ಸಾರಿಗೆ ಬಸ್ ನಿಲ್ದಾಣದಿಂದ- ಮೈಸೂರು ಗ್ರಾಮಾಂತರ ಬಸ್ನಿಲ್ದಾಣ, ಫೈವ್ಲೈಟ್ ವೃತ್ತ, ಅಂಬೇಡ್ಕರ್ ವೃತ್ತ, ಮಾರುತಿ ವೃತ್ತ, ಎನ್.ಆರ್. ಮೊಹಲ್ಲಾ, ರಾಜೇಂದ್ರನಗರ, ಆರ್.ಎಸ್. ನಾಯ್ಡುನಗರ, ವರ್ತುಲ ರಸ್ತೆ ಮಾರ್ಗವಾಗಿ ನಾರಾಯಣ ಹೃದಯಾಲಯಕ್ಕೆ 24 ದುಂಡು ನಡೆಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement