ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಅಂಬೇಡ್ಕರ್ ಯುವಸೇನೆ ಕಚೇರಿ ಉದ್ಘಾಟನೆ

Rashmi Kasaragodu
Updated On : 2 Oct 2013, 1:41 am

ಮೈಸೂರು: ಅಂಬೇಡ್ಕರ್ ಯುವಸೇನೆಯ ನಗರ ಹಾಗೂ ಜಿಲ್ಲಾ ಸಮಿತಿ ಕಚೇರಿಯ ಉದ್ಘಾಟನಾ ಸಮಾರಂಭವು ಅ.3ರ ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ. ನಗರ ಬಸ್ ನಿಲ್ದಾಣ, 2ನೇ ಮಹಡಿಯ ಕೊಠಡಿ ಸಂಖ್ಯೆ 21ರಲ್ಲಿ ಕಚೇರಿ ತೆರೆಯಲಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಮಹಾದೇವಿ ಕಚೇರಿ ಉದ್ಘಾಟಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಯುವಸೇನೆ ರಾಜ್ಯಾಧ್ಯಕ್ಷ ಎಚ್. ಕೋದಂಡರಾಮ್ ಅನಾವರಣಗೊಳಿಸುವರು ಎಂದು ಜಿಲ್ಲಾಧ್ಯಕ್ಷ ಜಿ. ಬಸವರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜ್ಯಾಧ್ಯಕ್ಷ ಎಚ್. ಕೋದಂಡರಾಮ್ ಮಾತನಾಡಿ, ನಮ್ಮ ಯುವಸೇನೆಯು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ದೊರಕಬಹುದಾದ ಯೋಜನೆಯ ಬಗ್ಗೆ ದಲಿತರಿಗೆ ತಿಳಿಸಿಕೊಡುವ ಉದ್ದೇಶದಿಂದ ನಿಮ್ಮ ಹಕ್ಕುಗಳ ಸಹಾಯವಾಣಿ ಕಿರು ಹೊತ್ತಿಗೆ ಹೊರತಂದು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು. ಯುವಸೇನೆ ರಾಜ್ಯ ಉಪಾಧ್ಯಕ್ಷ ಕೆ. ಶಿವಶಂಕರ್, ನಗರಾಧ್ಯಕ್ಷ ಎಸ್. ಪ್ರಕಾಶ್, ಕಾನೂನು ಸಲಹೆಗಾರ ಎಸ್.ಡಿ. ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement