ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾಪಣ್ಣ ವಿರುದ್ಧ ದಸಂಸ ಪ್ರತಿಭಟನೆ

Rashmi Kasaragodu
Updated On : 2 Oct 2013, 1:43 am

ಕ.ಪ್ರ.ವಾರ್ತೆ     ಮೈಸೂರು     ಅ. 1
ಹುಣಸೂರು ಮಾಜಿ ಶಾಸಕ ವಿ. ಪಾಪಣ್ಣ ಅವರಿಂದ ಸರ್ಕಾರಿ ರಸ್ತೆ, ಕೆರೆ, ನಾಲೆ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಹಾಗೂ ದೌರ್ಜನ್ಯಕ್ಕೊಳಗಾಗಿರುವ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಹುಣಸೂರು ತಾಲೂಕು ರಂಗಯ್ಯನಕೊಪ್ಪಲು ಗಿರಿಜನ ಹಾಡಿಯ ಬಳ್ಳಕ್ಕಿ ಒಣಿ  ತೆರವುಗೊಳಿಸಬೇಕು. ಬಳೆಗಾರನಕಟ್ಟೆ ಚಾನಲ್ ರಸ್ತೆ ತೆರವುಗೊಳಿಸಿ ವ್ಯವಸಾಯಕ್ಕೆ ನೀರು ಹರಿಯುವಂತೆ ಮಾಡಬೇಕು. ಧರ್ಮಾಪುರ ರಸ್ತೆಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಶಾಸಕ ಪಾಪಣ್ಣ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಿಂದೇಗೌಡ ಮತ್ತು ಕುಟುಂಬಕ್ಕೆ ರಕ್ಷಣೆ ಒದಗಿಬೇಕು. ಒತ್ತುವರಿಯಾಗಿರುವ ಸರ್ಕಾರಿ ರಸ್ತೆ, ಕೆರೆ, ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಮಾಜಿ ಶಾಸಕ ಪಾಪಣ್ಣ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಆಲಗೂಡು ಶಿವಕುಮಾರ್, ರತ್ನಪುರಿ ಪುಟ್ಟಸ್ವಾಮಿ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ಜಿಲ್ಲಾ ಖಜಾಂಚಿ ಬಿ.ಡಿ. ಶಿವಬುದ್ಧಿ, ಮುಖಂಡರಾದ ಕೆ.ಬಿ. ಸ್ವಾಮಿ, ಜಯಶೀಲಾಮೂರ್ತಿ, ರಾಮಕೃಷ್ಣ, ವಿವೇಕಾನಂದ, ಮೂರ್ತಿ, ವೀರೇಶ್, ನಂಜುಂಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement