ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೋಷಕರು- ಅಧ್ಯಾಪಕರು ಗಟ್ಟಿ ಇದ್ದಾಗ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ: ನಾಗಭೂಷಣ

Rashmi Kasaragodu
Updated On : 2 Oct 2013, 1:41 am

ಕ.ಪ್ರ.ವಾರ್ತೆ     ಮೈಸೂರು     ಅ. 1
ಕಾಲೇಜಿನ ಆಧಾರ ಸ್ತಂಭಗಳಾದ ಪೋಷಕರು- ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಗಟ್ಟಿಯಾಗಿದ್ದಾಗ ಮಾತ್ರ ಶೈಕ್ಷಣಿಕ ವಾತಾವರಣ ಉತ್ತಮಗೊಂಡು ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲ ಡಾ. ಎ.ಆರ್. ನಾಗಭೂಷಣ ಹೇಳಿದರು.
ಶಾರದಾ ವಿಲಾಸ ಕಾಲೇಜಿನಲ್ಲಿ ನಡೆದ ಪೋಷಕರು- ಅಧ್ಯಾಪಕರ ಸಭೆಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಯೆ ಕಾಲೇಜಿನ ಮುಖ್ಯ ಉದ್ದೇಶ. ಇದನ್ನು ಸಾಧ್ಯವಾಗಿಸಲು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳೆರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಹಾಗೂ ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ ಎಂದರು. ಸೆಮಿಸ್ಟರ್ ಪದ್ಧತಿಯಲ್ಲಿ ಕಾಲಾವಕಾಶ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗುವ ಜೊತೆಗೆ ಸಹಪಠ್ಯ ಚಟುವಟಿಕೆಯಲ್ಲೂ ಅವರು ಸಾಧನೆ ಮಾಡಬೇಕಿರುವುದರಿಂದ ಪೋಷಕರು ಅವರಿಗೆ ಒತ್ತಾಸೆ ನೀಡಬೇಕು ಎಂದು ಮನವಿ ಮಾಡಿದರು. ಜಿಪಂ ರೇಷ್ಮೆ ಅಧಿಕಾರಿ ಎಸ್.ಕೆ. ಸೋಮಸುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಜೆ. ಮುರಳೀಧರ ಸ್ವಾಗತಿಸಿದರು. ಪಿ. ಧನಲಕ್ಷ್ಮೀ ಅಧ್ಯಾಪಕರನ್ನು ಪರಿಚಯಿಸಿದರು. ಎಂ. ಗೋವಿಂದರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement