ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಲ್ಪಾವಧಿ ತರಬೇತಿಗೆ ಅರ್ಜಿ

Rashmi Kasaragodu
Updated On : 3 Oct 2013, 12:47 pm

ಮೈಸೂರು: ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು ಪರಿಶಿಷ್ಟ ಜಾತಿ ವಿಶೇಷ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಅರ್ಹ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಯುವಕ- ಯುವತಿಯರಿಗಾಗಿ ಅಲ್ಪಾವಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿಯು ಮೂರು ತಿಂಗಳ ಅವಧಿಯದ್ದಾಗಿದ್ದು, ಎರಡು ತಿಂಗಳು ಸಂಸ್ಥೆಯಲ್ಲಿ ಪಾಠ ಪ್ರವಚನ ಮತ್ತು ಒಂದು ತಿಂಗಳು ಕೈಗಾರಿಕಾ ತರಬೇತಿ ಇರುತ್ತದೆ. ಶಿಷ್ಯ ವೇತನ ನೀಡಲಾಗುತ್ತದೆ. ತರಬೇತಿ ನಂತರ ವಿದ್ಯಾರ್ಥಿಗಳಿಗೆ ಔಪಚಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಒದಗಿಸಿಕೊಡಲು ಸಕಲ ಪ್ರಯತ್ನ ಮಾಡಲಾಗುವುದು. ಕನಿಷ್ಠ 8ನೇ ತರಗತಿ ಓದಿರುವ, 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅ.7 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ನಿರ್ದೇಶಕ ಪ್ರೊ.ಕೆ.ಎಸ್. ನಾಗಪತಿ ತಿಳಿಸಿದ್ದಾರೆ. ದೂ. 0821- 2581013 ಸಂಪರ್ಕಿಸಬಹುದು.
ನೇಮಕ
ಮೈಸೂರು: ಕನ್ನಡ ಸೇನೆ- ಕರ್ನಾಟಕ ನಗರ ಘಟಕದ ಅಧ್ಯಕ್ಷರಾಗಿ ಕೆ. ಶಶಿಕುಮಾರ್ ನೇಮಕವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement