ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಸ್ವಿಇಐ ಸಂಸ್ಥೆ ವಾರ್ಷಿಕ ಕ್ರೀಡಾಕೂಟ

Rashmi Kasaragodu
Updated On : 3 Oct 2013, 12:30 pm

ಕ.ಪ್ರ.ವಾರ್ತೆ    ಮೈಸೂರು    ಅ. 2
ನಗರದ ಎಸ್ವಿಇಐ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳಾದ ಪ್ರೈಮರಿ, ಪ್ರೌಢಶಾಲೆ, ಪಬ್ಲಿಕ್ ಮತ್ತು ಕಾಲೇಜು ವಾರ್ಷಿಕ ಕ್ರೀಡಾಕೂಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಧ್ವಜಾರೋಹಣ ನೆರವೇರಿಸಿದ ಬಿಇಒ ರಾಮಾರಾಧ್ಯ ಮಾತನಾಡಿ, ವಿದ್ಯೆಯ ಜತೆಗೆ ಪಠ್ಯೇತರ ಚಟುವಟಿಕೆ ಬೇಕೆ ಬೇಕು. ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅಗತ್ಯ. ವಿದ್ಯಾರ್ಥಿ ಜೀವನ ತಪಸ್ಸು ಇದ್ದ ಹಾಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಪೋತರಾಜ್ ಮಾತನಾಡಿ, ನಮ್ಮ ಸಂಸ್ಥೆ ಉತ್ತಮ ಕಲಿಕಾ ವಾತಾವರಣ ಹಾಗೂ ಆಟದ ಮೈದಾನ ಹೊಂದಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಹೊಸದಾಗಿ ನಿರ್ಮಾಣಗೊಂಡ ಬ್ಯಾಸ್ಕೆಟ್ಬಾಲ್ ಕೋರ್ಟ್ ಅನ್ನು ಟಿ.ಪ್ರಭಾಕರ ಶೆಟ್ಟಿ, ಪಬ್ಲಿಕ್ ಶಾಲೆಯ ನೂತನ ವಿಜ್ಞಾನ ಪ್ರಯೋಗಾಲಯವನ್ನು ಬಿ. ಶಿವಲಿಂಗಪ್ಪ ಉದ್ಘಾಟಿಸಿದರು.
ಶಿಸ್ತುಬದ್ಧ ಪಥಸಂಚಲನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಎ. ನಿರ್ಣಯ ನೀಡಿದ ಪ್ರತಿಜ್ಞಾ ಸ್ವೀಕರಿಸಲಾಯಿತು. ಆನ್ಸಿಯಾ ಡಿಸೋಜಾ ಸ್ವಾಗತಿಸಿದರು. ಅವಿನಾಶ್ ವಂದಿಸಿದರು. ಉಮಾ ಪೇಶ್ವೆ, ಜಯಶ್ರೀ, ಸುಮಾ, ಲತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement