ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ದಸರಾ ದಶಮಾನೋತ್ಸವ

Rashmi Kasaragodu
Updated On : 3 Oct 2013, 12:38 pm

ಕ.ಪ್ರ.ವಾರ್ತೆ    ಕೆ.ಆರ್. ನಗರ    ಅ. 2
ಪಟ್ಟಣದ ಕನಕ ಗುರುಪೀಠದಲ್ಲಿ ಅ.4 ರಿಂದ 14 ರವರೆಗೆ ಚಾಮುಂಡೇಶ್ವರಿ ಪೂಜೆಯ ಅಂಗವಾಗಿ ದಸರಾ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಪೀಠಾಧೀಶ ಶಿವಾನಂದಪುರಿ ಶ್ರೀಗಳು ಹೇಳಿದರು.
ದಸರಾ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಅ.5 ರಂದು ರಂಗೋಲಿ ಸ್ಪರ್ಧೆ, ಅ.6 ರಿಂದ 9 ರವರೆಗೆ ಸ್ಥಳೀಯ ಜಾನಪದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಜಾನಪದ ಸಮ್ಮೇಳನದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.10 ರಂದು 25 ಜತೆ ಸಂಗೊಳ್ಳಿ ರಾಯಣ್ಣ ಕಾಟಾ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಅ.12 ರಿಂದ 14 ರವರೆಗೆ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ವಿವಿಧ ಐತಿಹಾಸಿಕ ನಾಟಕಗಳು ನಡೆಯಲಿವೆ. ಜತೆಗೆ ನಿತ್ಯ ಸಂಜೆ 5ರ ನಂತರ ಚಾಮುಂಡೇಶ್ವರಿ ಕೋಟಿ ಜಪ ಪಠಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಗಳು ನಡೆಯುವ ದಿನಗಳಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಗಣ್ಯರಿಗೆ ಮತ್ತು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಭಕ್ತರಿಗೆ ಸನ್ಮಾನ ಹಾಗೂ ಪರಮ ಪೂಜ್ಯರಿಂದ ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ. ಅ.4 ರಂದು ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ನಂದಿ ಕಂಬದ ಪೂಜೆ ಮತ್ತು ಮೆರವಣಿಗೆ ಹೊರಡಲಿದ್ದು, ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಸಂಚರಿಸುವ ಮೆರವಣಿಗೆ ಹೊರವಲಯದಲ್ಲಿರುವ ಶ್ರೀಮಠ ತಲುಪಲಿದ್ದು, ದಸರಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ವಿವರಿಸಿದರು.
ಮಠದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಚಿವೆ ಉಮಾಶ್ರೀ, ಸಂಸದರಾದ ಎಚ್. ವಿಶ್ವನಾಥ್, ರಮ್ಯಾ, ಶಾಸಕರಾದ ಸಾ.ರಾ. ಮಹೇಶ್, ವಾಸು, ವರ್ತೂರು ಪ್ರಕಾಶ್, ಮುಖಂಡ ದೊಡ್ಡಸ್ವಾಮೇಗೌಡ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement