ನೀಲಮ್ಮ ಕೊಳ ಅಭಿವೃದ್ಧಿಗೆ ಚಾಲನೆ
ಗುಂಡ್ಲುಪೇಟೆ: ಗಾಂಧಿ ಜಯಂತಿ ಅಂಗವಾಗಿ ನಮ್ಮ ಗ್ರಾಮ ನಮ್ಮ ಕೆರೆ ಯೋಜನೆಯಡಿ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿರುವ ನೀಲಮ್ಮ ಕೊಳಕ್ಕೆ ಗ್ರಾಪಂ ಉಪಾಧ್ಯಕ್ಷ ನಾಗಶೆಟ್ಟಿ ಗುದ್ದಲಿಪೂಜೆ ಮಾಡಿದರು.
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿರುವ ನೀಲಮ್ಮನ ಕೊಳವನ್ನು ಉದ್ಯೋಗ ಖಾತ್ರಿ ಯೋಜನೆಯಡಿ 1 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು.
ಗ್ರಾಪಂ ಸದಸ್ಯ ಅಶೋಕ್, ನಾಗಮ್ಮ, ಮಾದಮ್ಮ, ಮುಖಂಡರಾದ ಸುಬ್ರಹ್ಮಣ್ಯ, ಕೂಸಶೆಟ್ಟಿ, ಗ್ರಾಪಂ ಕಾರ್ಯದರ್ಶಿ ರಂಗಸ್ವಾಮಿ, ಬಿಲ್ ಕಲೆಕ್ಟರ್ ಸತೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.