ಬಾಪೂಜಿಗೆ ಜಿಲ್ಲಾಡಳಿತದ ನಮನ
ಮೈಸೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಬುಧವಾರ ನಗರದ ಗಾಂಧಿಚೌಕದ ಬಳಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೇಯರ್ ಎನ್.ಎಂ. ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ಜಿಲ್ಲಾಧಿಕಾರಿ ಸಿ.ಶಿಖಾ, ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಎಂಡಿಎ ಆಯುಕ್ತ ಎಸ್. ಪಾಲಯ್ಯ, ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಶಾಸಕರಾದ ವಾಸು, ತನ್ವೀರ್ ಸೇಠ್, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು ಮತ್ತಿತರರು ಇದ್ದರು.
'ಗಾಂಧಿ ಅಹಿಂಸಾವಾದ ಇಂದಿಗೂ ಅವಿಸ್ಮರಣೀಯ'
ಟಿ. ನರಸೀಪುರ: ಮಹಾತ್ಮ ಗಾಂಧೀಜಿ ಅವರ ಅಹಿಂಸಾವಾದ ಎಂಬುದು ಜಾಗತಿಕ ಜಗತ್ತಿನಲ್ಲಿ ಇಂದಿಗೂ ಅವಿಸ್ಮರಣೀಯವಾಗಿ ಉಳಿದಿದೆ ಎಂದು ಎಪಿಎಂಸಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷ ಹೊನ್ನನಾಯ್ಕ ಹೇಳಿದರು. ತಾಲೂಕಿನ ಸಿದ್ದನಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ನಾಗರಿಕ ಪ್ರಜ್ಞಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸದಸ್ಯ ಸಿದ್ದನಹುಂಡಿ ನಟರಾಜು, ಮುಖ್ಯ ಶಿಕ್ಷಕ ಬಸವರಾಜು, ಎಸ್ಡಿಎಂಸಿ ಅಧ್ಯಕ್ಷ ಶಂಕರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಕೇಶವ, ಜ್ಞಾನವಿಕಾಶ ಸಮನ್ವಯಾಧಿಕಾರಿ ಮಂಜುಳ ಇದ್ದರು.
ಕೆಂಡನಕೊಪ್ಪಲು ಶಾಲೆಯಲ್ಲಿ...
ಟಿ. ನರಸೀಪುರ: ಮಹಾತ್ಮ ಗಾಂಧಿಜಿ ಅವರು ಅಹಿಂಸೆಯ ಹೋರಾಟದಿಂದ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಹೇಳಿದರು. ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿಧೂತ ಗಾಂಧೀಜಿ ಅವರಿಂದಲೇ ಭಾರತಕ್ಕೆ ಜಾತ್ಯತೀತ, ಪ್ರಜಾಪ್ರಭುತ್ವ ಹಾಗೂ ಶಾಂತಿ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದೆ ಎಂದು ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ರಾಚಪ್ಪ, ವೆಂಕಟೇಶ್, ಮಹದೇವ್, ಜವರನಾಯ್ಕ, ನಾಗ, ಸಿದ್ದರಾಜು, ಮಂಟಯ್ಯ, ಮಹೇಶ್, ಪ್ರಸನ್ನ, ಶಾಲೆಯ ಶಿಕ್ಷಕರಾದ ಎಚ್.ಎಂ. ಉಷಾರಾಣಿ, ಜಯಶೀಲ, ಚಾಮುಂಡಿ, ಮಲ್ಲಣ್ಣ ಇದ್ದರು.
ಟಿ. ನರಸೀಪುರ ಪಪಂನಲ್ಲಿ
ಆವರಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಿ ಬಾಪೂ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್, ಕಿರಿಯ ಎಂಜಿನಿಯರ್ ಪುರುಷೋತ್ತಮ್, ಯೋಜನಾಧಿಕಾರಿ ಕೆಂಪರಾಜು, ಸದಸ್ಯರಾದ ರತ್ನಮ್ಮ, ಟಿ.ಜಿ. ಪುಟ್ಟಸ್ವಾಮಿ, ನೈಸ್ ಮಹದೇವಸ್ವಾಮಿ, ಮುಖಂಡ ಮಣಿಕಂಠ ಹಾಜರಿದ್ದರು.
ಹಣ್ಣು ಹಂಪಲು ವಿತರಣೆ: ಟಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಾತ್ಮ ಗಾಂಧಿಜೀ ಜಯಂತಿ ಪ್ರಯುಕ್ತ ಶ್ರೀ ತುರುಕನಕಟ್ಟೆ ರಸ್ತೆಬದಿ ಪೆಟ್ಟಿಗೆ ಅಂಗಡಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದವರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವಿಕುಮಾರ್, ಕಿರಗಸೂರು ಗ್ರಾಪಂ ಅಧ್ಯಕ್ಷ ಮಂಡಿಪ್ರಕಾಶ್, ಸಂಘದ ಅಧ್ಯಕ್ಷ ಹರೀಶ್, ಮುಖಂಡ ಶಿವಶಂಕರ್, ನಂಜುಂಡಸ್ವಾಮಿ, ಕಲೀಂ, ಶಶಿ, ಕರಿಯಪ್ಪ, ಬಸವರಾಜು, ಸಿದ್ದಣ್ಣ ಇದ್ದರು.
ಹುಣಸೂರಿನಲ್ಲಿ ಸ್ಮರಣೆ
ಹುಣಸೂರು: ಗಾಂಧಿಜಿ ಅವರ ಹೋರಾಟದ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಬೇಕು ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಆನಂದ್ ಅಭಿಪ್ರಾಯಪಟ್ಟರು. ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಮಹತ್ಮಾ ಗಾಂಧಿಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ಆನಂದ್, ಸದಸ್ಯರಾದ ಶಿವಕುಮಾರ್, ಡಾ. ಸರೋಜಿ ವಿಕ್ರಂ ಅವರು ಪುಷ್ಪಾರ್ಚನೆ ಮಾಡಿದರು. ಮುಖ್ಯ ಶಿಕ್ಷಕ ರೇಣುಕಾಪ್ರಸಾದ್, ಶಿಕ್ಷಕಿ ಮಮತಾ, ವಿದ್ಯಾರ್ಥಿಗಳಾದ ಪೂಜಾ, ವರ್ಷ, ಸಿಂಚನ, ದಿನದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕ ಅನಂತನಾರಾಯಣ ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರ ಕುರಿತು ಶುಶ್ರಾವ್ಯವಾಗಿ ಭಜನೆ ಮಾಡಿದರು.