ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಂಗಾಯಣದ ಸಾರಥಿಯಾಗಿ ಜನ್ನಿ ಅಧಿಕಾರ ಸ್ವೀಕಾರ

Mainashree
Updated On : 2 Oct 2013, 10:37 am

ಮೈಸೂರು: ರಂಗಾಯಣದ ಆಡಳಿತದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮೂಗು ತೂರಿಸುವ ಕೆಲಸ ಆಗಬಾರದು ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ಹೇಳಿದರು. ರಂಗಾಯಣ ಉಪ ನಿರ್ದೇಶಕ ಎಸ್.ಐ. ಬಾವಿಕಟ್ಟಿ ಅವರಿಂದ ಬುಧವಾರ ರಂಗಾಯಣ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜನ್ನಿ ಮಾತನಾಡಿ, ರಂಗಾಯಣದ ಆಡಳಿತದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸೇರಿ ಯಾರೊಬ್ಬರೂ ಮೂಗು ತೂರಿಸಬಾರದು. ಹಿಂದೆ ಆಗಿರುವ ತಪ್ಪುಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗೆ ಮೂಗು ತೂರಿಸಿದರೆ ಕಲಾವಿದರ ಸೃಜನಶೀಲತೆಗೆ ತೊಂದರೆಯಾಗುತ್ತದೆ ಎಂದರು.  ಅಧಿಕಾರ ಸ್ವೀಕರಿಸಲು ರಂಗಾಯಣಕ್ಕೆ ಆಗಮಿಸಿದ ಜನ್ನಿ ಅವರನ್ನು ರಂಗಾಯಣ ಕಲಾವಿದರು ಆತ್ಮೀಯವಾಗಿ ಬರಮಾಡಿಕೊಂಡರು. ಬಾವಿಕಟ್ಟಿ ಅವರು ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿ, ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement