ದಸರಾಗೆ ರೇಲ್ವೆ ಹೆಚ್ಚುವರಿ ಟಿಕೆಟ್ ಬುಕ್ಕಿಂಗ್ ಕೌಂಟರ್
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನೈಋತ್ಯ ರೇಲ್ವೆಯು ಮೈಸೂರಿನ ರೇಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಟಿಕೆಟ್ ಬುಕ್ಕಿಂಗ್ ಕೇಂದ್ರ ತೆರೆಯುತ್ತಿದೆ. ಅ.14 ರಂದು ಮೈಸೂರು ಮತ್ತು ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ನಡೆಯಲಿದೆ. ಅಲ್ಲದೆ ಅದೆ ರೈಲನ್ನು ಚಾಮರಾಜನಗರದವರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ ಮೈಸೂರು- ಧಾರವಾಡ ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವಿನ ಎಲ್ಲಾ ನಿಲ್ದಾಣದಲ್ಲಿಯೂ ನಿಲ್ಲಿಸುವಂತೆ ಸೂಚಿಸಲಾಗಿದೆ. ಚಾಮರಾಜಪುರಂ, ನಂಜನಗೂಡು ಮತ್ತು ಚಾಮರಾಜನಗರ ರೇಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಬುಕ್ಕಿಂಗ್ ಕೇಂದ್ರ ತೆರೆಯಲಾಗುತ್ತಿದೆ. ಹೆಚ್ಚು ಮಂದಿ ಪ್ರಯಾಣಿಕರು ಬರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ರೇಲ್ವೆ ಇಲಾಖೆ ತಿಳಿಸಿದೆ.