ನಾಳೆಯಿಂದ ನಗರದ ವಿವಿಧೆಡೆ ಶರನ್ನವರಾತ್ರಿ
ಕ.ಪ್ರ.ವಾರ್ತೆ ಮೈಸೂರು ಅ. 3
ವಾಣಿವಿಲಾಸ ಮೊಹಲ್ಲಾದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಅ.5 ರಿಂದ 15ರವರೆಗೆ ಶರನ್ನವರಾತ್ರಿ ಉತ್ಸವ- 2013 ಆಯೋಜಿಸಲಾಗಿದೆ. ಅ.5 ರಂದು ಅಮ್ಮನವರಿಗೆ ಅರ್ಧನಾರೀಶ್ವರ ಅಲಂಕಾರ, ಅ.6 ರಂದು ಶ್ರೀ ಅನ್ನಪೂರ್ಣೇಶ್ವರಿ ಅಲಂಕಾರ, ಅ.7 ರಂದು ಶ್ರೀ ಮಹಾಕಾಳಿ ಅಲಂಕಾರ, ಅ.8 ರಂದು ಶ್ರೀ ಮಹಾಲಕ್ಷ್ಮಿ ಅಲಂಕಾರ, ಅ.9 ರಂದು ರಾಜರಾಜೇಶ್ವರಿ ಅಲಂಕಾರ, ಅ.10 ರಂದು ಶ್ರೀ ಸರಸ್ವತಿ ಅಲಂಕಾರ, ಅ.11 ರಂದು ಶ್ರೀ ಗಾಯತ್ರಿ ಅಲಂಕಾರ, ಅ.12 ರಂದು ಸುಮಂಗಲಿ ಪೂಜೆ, ಶ್ರೀ ದುರ್ಗಾ ಅಲಂಕಾರ, ಅ. 13ರಂದು ಶ್ರೀ ಚಂಡಿಕಾ ಹೋಮ, ಶ್ರೀ ಅಂಬಾಭವಾನಿ ಅಲಂಕಾರ ನಡೆಯಲಿದೆ.
ಸೀತಾವಿಲಾಸ ರಸ್ತೆಯ ಮೂಲಾಮ್ನಾಯ ಶ್ರೀ ಕಂಚಿಕಾಮಕೋಟಿ ಸರ್ವಜ್ಞಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.5 ರಿಂದ 14 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಚಂಡಿಕಾ ಪಾರಾಯಣ, ಹೋಮ, ಸಂಜೆ ಅಷ್ಟಾವಧಾನ ಸೇವೆ ನಡೆಯುವುದು. ಅ.13 ರಂದು ಚಂಡಿಕಾ ಹೋಮ, ಅ.14 ರಂದು ಅಕ್ಷರಾಭ್ಯಾಸ ನಡೆಯಲಿದೆ.
ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅ.5 ರಂದು ಪುರುಷಸೂಕ್ತ ಹೋಮ, ಅ.6 ರಂದು ಶ್ರೀಸೂಕ್ತ ಹೋಮ, ಅ.7 ರಂದು ಶ್ರೀ ರುದ್ರೈಕಾದಶಿನೀ ಹೋಮ, ಅ. 8 ರಂದು ಸಹಸ್ರ ಮೋದಕ ಗಣಪತಿ ಹೋಮ, ಅ.9 ರಂದು ಶ್ರೀ ಲಲಿತಾ ಹೋಮ, ಅ. 10 ರಂದು ಶ್ರೀ ಸುಬ್ರಹ್ಮಣ್ಯ ಹೋಮ, ಅ. 11 ರಂದು ಶ್ರೀ ಗಾಯತ್ರಿ ಹೋಮ, ಅ. 12 ರಂದು ಶ್ರೀ ದುರ್ಗಾ ಹೋಮ, ಅ. 13 ರಂದು ಶ್ರೀ ನವ ಚಂಡಿಕಾ ಹೋಮ ಮತ್ತು ಅ. 14 ರಂದು ಶ್ರೀ ಧನ್ವಂತರಿ ಹೋಮ ನಡೆಯಲಿದೆ.
ಜಯಲಕ್ಷ್ಮೀಪುರಂನ ತ್ರಯೀನ್ಯಾಸ್ ವತಿಯಿಂದ 17ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಆಯೋಜಿಸಲಾಗಿದೆ. ಅ.5 ರಂದು ಶ್ರೀ ಮಹಾವಾರಾಹಿ ಹೋಮ, ಅ.6 ರಂದು ಅಷ್ಟಭೈರವ ಹೋಮ, ಅ.7 ರಂದು ಶ್ರೀ ಮಹಾಪ್ರತ್ಯಂಗೀರಾ ಹೋಮ, ಅ.8 ರಂದು ಶ್ರೀ ಮಹಾಗಣಪತಿ ಹೋಮ, ಅ.9 ರಂದು ಶ್ರೀ ಲಲಿತಾ ಮಹಾಯಾಗ ಮತ್ತು ದಶಮಹಾವಿದ್ಯಾ ಹೋಮ, ಅ.10 ರಂದು ಶ್ರೀಮಹಾವಿಷ್ಣು ದಶಾವತಾರ ಹೋಮ, ಅ.11 ರಂದು ಶ್ರೀ ರಾಜಶ್ಯಾಮಲ ಹೋಮ, ಅ.12 ರಂದು ಶ್ರೀ ವಿದ್ಯಾ ನವದುರ್ಗಹೋಮ, ಅ. 13 ರಂದು ನವಚಂಡಿಯಾಗ ನಡೆಯುವುದು.
ಜಯಲಕ್ಷ್ಮೀಪುರಂ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯು ಅ.5 ರಿಂದ 14 ರವರೆಗೆ ನವರಾತ್ರಿ ಪ್ರಯುಕ್ತ ಪ್ರತಿದಿನ ಸಂಜೆ 6 ರಿಂದ 7ರವರೆಗೆ ವಿದ್ವಾನ್ ಮುಕುಂದರಾವ್ ಅವರಿಂದ ಶ್ರೀ ಶ್ರೀನಿವಾಸ ಕಲ್ಯಾಣ ಪ್ರವಚನ ಏರ್ಪಡಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ವ್ಯವಸ್ಥಾಪಕರು ಕೋರಿದ್ದಾರೆ.