ನೀರು ಬಳಕೆದಾರರ ಸಂಘಕ್ಕೆ ಆಯ್ಕೆ
ಹೊಸೂರು: ಕೆ.ಆರ್. ನಗರ ತಾಲೂಕು ಕರ್ತಾಳು ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಕೆ.ಟಿ. ಮಹದೇವಪ್ಪ, ಉಪಾಧ್ಯಕ್ಷರಾಗಿ ಎ.ಡಿ. ರಾಜಶೇಖರಯ್ಯ ಆಯ್ಕೆಯಾಗಿದ್ದಾರೆ.
ಶೇ.100 ಫಲಿತಾಂಶ
ಸುತ್ತೂರು: 2012-13ನೇ ಸಾಲಿನ ಡಿ.ಇಡಿ ಪರೀಕ್ಷೆಯಲ್ಲಿ ನಂಜನಗೂಡು ತಾಲೂಕು ಸುತ್ತೂರು ಜೆಎಸ್ಎಸ್ ಡಿ.ಇಡಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಕುಳಿತ 50 ವಿದ್ಯಾರ್ಥಿಗಳಲ್ಲಿ 28 ಮಂದಿ ಉನ್ನತ ಶ್ರೇಣಿ ಹಾಗೂ 22 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕೆರೆ ಪುನಶ್ಚೇತನ
ಬಿಳಿಕೆರೆ: ಹುಣಸೂರು ತಾಲೂಕು ಬಿಳಿಕೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ ಜೀನಹಳ್ಳಿ ಹೊಸಕಟ್ಟೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗಳ ಪುನಶ್ಚೇತನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಬಾಲೇಂದ್ರ, ಉಪಾಧ್ಯಕ್ಷ ದೇವಮ್ಮ, ತಾಪಂ ಅಧ್ಯಕ್ಷ ದೇವಕಿ ತಿಮ್ಮನಾಯಕ, ಉಪಾಧ್ಯಕ್ಷ ಎನ್. ಮಹದೇವು, ಗ್ರಾಪಂ ಸದಸ್ಯರು, ಉಮಾಶಂಕರ್, ಪಿಡಿಒ ಬಿ.ವಿ. ಶ್ರೀನಿವಾಸ್ ಇದ್ದರು.