ಶಿಕ್ಷಣದ ಮೇಲೆ ರಾಷ್ಟ್ರ ಭವಿಷ್ಯ ನಿರ್ಧಾರ'
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಅ. 3
ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣದ ಮೇಲೆ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ನಿವೃತ್ತ ಉಪನ್ಯಾಸಕ ಎಸ್.ಆರ್. ರಾಮೇಗೌಡ ಹೇಳಿದರು.
ಕೆ.ಆರ್. ನಗರ ತಾಲೂಕು ಸಾಲಿಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಸಾ.ರಾ. ಸ್ನೇಹ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿಗೆ ದೇವರು ಎಲ್ಲವನ್ನು ಕೊಟ್ಟಾಗ ಅವರು ಬೇರೆಯವರಿಗೆ ವಿವಿಧ ಹಂತಗಳಲ್ಲಿ ಸಹಾಯಹಸ್ತ ನೀಡಬೇಕು ಆ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.
ಉಪ ಪ್ರಾಂಶುಪಾಲೆ ಭಾಗ್ಯವತಿ, ಎಸ್ಡಿಎಂಸಿ ಅಧ್ಯಕ್ಷ ಸಾ.ರಾ. ಸತೀಶ್, ಸದಸ್ಯ ಗಂಗಾಧರ್, ಸಾ.ರಾ. ಸ್ನೇಹ ಬಳಗದ ಕಾರ್ಯದರ್ಶಿ ಆನಂದ್, ಮಹೇಶ್, ಶಿಕ್ಷಕರಾದ ನಾರಾಯಣ್, ಎಸ್.ಕೆ. ಲಲಿತಮ್ಮ, ಟಿ. ರಾಮಚಂದ್ರ, ಆರ್. ಕಿರಣ್, ಅರುಣ್ಕುಮಾರ್, ಶ್ರೀಶಾಂತ್, ಪಿ. ರಾಮಸ್ವಾಮಿ, ಜಿ.ಸಿ. ಅರುಣ್, ಎಂ. ಮಹೇಶ್, ಕೆ.ವಿ. ವಿಶ್ವನಾಥ್ ಹಾಗೂ ವಿದ್ಯಾರ್ಥಿಗಳು ಇದ್ದರು.