ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅನುಮಾನಾಸ್ಪದ ವ್ಯಕ್ತಿ ಸೆರೆ: ಪಿಸ್ತೂಲು, ಗುಂಡುಗಳ ವಶ

Mainashree
Updated On : 4 Oct 2013, 10:12 am

ಮೈಸೂರು: ಖಚಿತ ಮಾಹಿತಿ ಮೇರೆಗೆ ರಾಜೀವ್‌ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ್ಚಲೀಸರು ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರಿಂದ ಪಿಸ್ತೂಲು ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಕೆಲ ದಿನಗಳ ಹಿಂದೆ ಮೈಸೂರಿಗೆ ಬಂದು ರಾಜೀವ್‌ನಗರದಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿ ಯಾವಾಗಲೂ ಮನೆ ಬಾಗಿಲು ಹಾಕಿಕೊಂಡಿರುತ್ತಿದ್ದ. ಸಾರ್ವಜನಿಕರು ಈತನ ಚಲನವಲನದ ಬಗ್ಗೆ ್ಚಲೀಸರಿಗೆ ಮಾಹಿತಿ ನೀಡಿದ್ದರು. ಈ ಆಧಾರದ ಮೇಲೆ ಎನ್.ಆರ್. ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಗುರುವಾರ ರಾತ್ರಿ ಹಠಾತ್ತನೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ವ್ಯಕ್ತಿಯ ಬಳಿ ಇದ್ದ ಪಿಸ್ತೂಲು ಹಾಗೂ ಗುಂಡುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
ಪಾಕ್ ಮೂಲದ ನಂಟು ಶಂಕೆ: ಕಳೆದ ಎರಡು ವರ್ಷಗಳ ಹಿಂದೆ ಇದೇ ರಾಜೀವ್‌ನಗರದಲ್ಲಿ ಪಾಕಿಸ್ತಾನ ಕರಾಚಿ ಮೂಲದ ಫಹಾದ್ ಹಾಗೂ ಅಲಿಹುಸೇನ್ ಎಂಬವರು ಮನೆಯೊಂದರಲ್ಲಿ ತಂಗಿದ್ದರು. ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರಿಂದ ಅಂದು ಗ್ರೆನೇಡ್, ಎಕೆ-47, ಜಿಲೆಟಿನ್, ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳ ನಕ್ಷೆ ಸೇರಿದಂತೆ ಕೆಲ ಸ್ಫೋಟಕ ಧ್ವಂಸಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಇದೇ ಪ್ರದೇಶದಲ್ಲಿ ಈ ವ್ಯಕ್ತಿಯನ್ನು ಬಂಧಿಸಿರುವುದು ಮತ್ತು ಆತನ ಬಳಿಯೂ ಸ್ಫೋಟಕ ವಸ್ತುಗಳಿರುವುದು ಅನುಮಾನಕ್ಕೆ ಎಡೆಮಾಡಿದೆ.
ದಸರೆಯ ಸಂದರ್ಭದಲ್ಲಿ ಈ ರೀತಿಯ ಅನುಮಾನಸ್ಪದ ವ್ಯಕ್ತಿ ಸಿಕ್ಕಿಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement