ಜೆಎಸ್ಎಸ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ
ಸರಗೂರು: ಎಚ್.ಡಿ. ಕೋಟೆ ತಾಲೂಕಿನ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರಗೂರು ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹೆಚ್ಚು ಬಹುಮಾನ ಗಳಿಸಿದ್ದಾರೆ.
ಬಹುಮಾನ ಪಡೆದ ವಿವರ. ಥ್ರೋಬಾಲ್- ಪ್ರಥಮ ಮತ್ತು ಪಾರಿತೋಷಕ, ಕಬಡ್ಡಿ- ದ್ವಿತೀಯ ಮತ್ತು ಪಾರಿತೋಷಕ, ತಟ್ಟೆ ಎಸೆತ- ಎಸ್. ಜ್ಯೋತಿ (ಪ್ರಥಮ), ಸೂರ್ಯಕಾಂತಿ (ತೃತೀಯ), ಗುಂಡು ಎಸೆತ- ಎಸ್. ಜ್ಯೋತಿ (ಪ್ರಥಮ), ಸವಿತಾ (ದ್ವಿತೀಯ), ಜಾವಲಿನ್ ಥ್ರೋ-ಭವ್ಯ (ಪ್ರಥಮ), ಮೇಘನ (ದ್ವಿತೀಯ), ಎತ್ತರ ಜಿಗಿತ- ಪ್ರೀತಿ (ದ್ವಿತೀಯ), ಎತ್ತರ ಜಿಗಿತ- ಚಿಕ್ಕದೇವಮ್ಮ (ತೃತೀಯ), ಉದ್ದ ಜಿಗಿತ- ಎಸ್.ಎನ್. ಕಾವ್ಯ (ಪ್ರಥಮ), ಚಿಕ್ಕದೇವಮ್ಮ (ದ್ವಿತೀಯ), 200 ಮೀ. ಓಟ- ಎಸ್.ಎನ್. ಕಾವ್ಯ (ತೃತೀಯ), ಟ್ರಿಪಲ್ ಜಂಪ್- ಎಸ್.ಎನ್. ಕಾವ್ಯ (ಪ್ರಥಮ).
ವಿಜೇತ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕ ಎಸ್. ಸೆಲ್ವರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೈದ್ಯರತ್ನ, ಡಾ.ಸಿ.ಎನ್. ಮೃತ್ಯುಂಜಯಪ್ಪ, ಪ್ರಾಂಶುಪಾಲ ಕೆ.ಟಿ. ಚಂದ್ರಶೇಖರಾಚಾರ್, ಉಪನ್ಯಾಸಕರು ಶ್ಲಾಘಿಸಿದ್ದಾರೆ.