ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ಮಕ್ಕಳ ದಸರಾ ಆರಂಭ

Rashmi Kasaragodu
Updated On : 5 Oct 2013, 12:15 pm

ಕ.ಪ್ರ.ವಾರ್ತೆ  ಮೈಸೂರು  ಅ. 4
ದಸರಾ ಮಹೋತ್ಸವದ ಪ್ರಯುಕ್ತ ಅ.6 ರಿಂದ 9 ರವರೆಗೆ ನಗರದ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಏರ್ಪಡಿಸಲಾಗಿದೆ. ಅ.6ರ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಚಿಣ್ಣರ ಸಾಹಿತ್ಯ ಬಿಡುಗಡೆ ಕಾರ್ಯಕ್ರಮ, ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಾತನಾಡುವ ಗೊಂಬೆ ಪ್ರದರ್ಶನ, ಕೀಲು ಗೊಂಬೆ ಪ್ರದರ್ಶನ, ಅ.7 ರಂದು ಜನಪದ ನೃತ್ಯ ಸ್ಪರ್ಧೆ, ವಿವಿಧ ವೇಷಭೂಷಣ ಸ್ಪರ್ಧೆ, ಜನಪದ ನೃತ್ಯ ಸ್ಪರ್ಧೆ, ಪವಾಡ ರಹಸ್ಯ ಬಯಲು, ಚಿತ್ರಕಲಾ ಸ್ಪರ್ಧೆ, ಅ.8 ರಂದು ಸಮೂಹ ನೃತ್ಯ, ಆಲೀಬಾಬಾ ಮತ್ತು ನಲವತ್ತು ಮಂದಿ ಕಳ್ಳರು ನಾಟಕ ಪ್ರದರ್ಶನ, ಏಕಪಾತ್ರಾಭಿನಯ, ಸುಗಮ ಸಂಗೀತ, ಅ.9 ರಂದು ಸಂಗೀತ ಕಛೇರಿ, ರಸಪ್ರಶ್ನೆ ಸ್ಪರ್ಧೆ, ಸಮಾರೋಪ ಸಮಾರಂಭ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement