ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರೌಢಶಾಲೆಯ ವಾರ್ಷಿಕೋತ್ಸವ

Rashmi Kasaragodu
Updated On : 5 Oct 2013, 12:17 pm

ಪಿರಿಯಾಪಟ್ಟಣ: ಧರ್ಮ ಪ್ರವರ್ತಕ ಬೆಂಗಳೂರು ಸುಬ್ಬಣ್ಣನವರ ಸರ್ಕಾರಿ ಬಾಲಕರ ಪ್ರೌಢಶಾಲೆಯ 60ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಹಿರಿಯ ವಿದ್ಯಾರ್ಥಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವಸಂತರಾಜೇ ಅರಸ್ ಮಾತನಾಡಿ, ಶಾಲೆಗೆ 60 ವರ್ಷ ಪೂರ್ಣಗೊಂಡಿದ್ದು, ಶಾಲೆಯ 60ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಬೇಕಿದ್ದು, ಹಿಂದೆ ಈ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಆಹ್ವಾನಿಸುವುದಾಗಿ ತಿಳಿಸಿದರು. ಶಾಲೆಯ ಪ್ರಾಂಶುಪಾಲ ಪುಟ್ಟಶೆಟ್ಟಿ ಮಾತನಾಡಿ, ಶಾಲೆಯ ವಜ್ರಮಹೋತ್ಸವ ಆಚರಿಸುವ ನಿಮಿತ್ತ ಶಾಲಾ ವಜ್ರಮಹೋತ್ಸವ ಸಮಿತಿ ರಚಿಸಬೇಕಿದ್ದು, ಅದಕ್ಕಾಗಿ ಶಾಲೆಯ ಎಲ್ಲಾ ಹಿರಿಯ ವಿದ್ಯಾರ್ಥಿಗಳ ಆಹ್ವಾನಿಸಬೇಕಿದೆ. ಹಿರಿಯ ವಿದ್ಯಾರ್ಥಿಗಳು ತಮ್ಮ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳು ಪತ್ರದ ಮೂಲಕ ಹಾಗೂ ಇ-ಮೇಲ್ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಜನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್, ಸಮಾಜಸೇವಾ ರತ್ನ ಕೆ.ಎಂ. ಶಿವಶಂಕರ್, ಬಿ.ಪಿ.ಕೆ. ಷಣ್ಮುಖಂ, ಪಿ.ವಿ. ನಂಜುಂಡಸ್ವಾಮಿ ಹಿರಿಯ ಪತ್ರಕರ್ತ ಕಂಪ್ಲಾಪುರ ಮೋಹನ್ ಇದ್ದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ದೂರವಾಣಿ ಮತ್ತು ವಿಳಾಸ ನೀಡಬೇಕಾದ ವಿವರವನ್ನು ್ಜಞ್ಛಠಜ್ಠ್ಝಣಛಠಛಡಿಟಿಛಅ್ಜಟಛ್ಝಟ.್ಛ್ಟಟ ಹಾಗೂ ಟಿಛ ್ಜಛಝಜಡಿಡಿಡಿಣಅ್ಜಟಛ್ಝಟ.್ಛ್ಟಟ, ಮೊ. 9341852690, 9880872479 ಕಳುಹಿಸುವಂತೆ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಮುನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement