ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೊಂಬೆ ಪ್ರದರ್ಶನ

Rashmi Kasaragodu
Updated On : 5 Oct 2013, 12:20 pm

ಮೈಸೂರು: ಸಿದ್ದಾರ್ಥನಗರದ ಶ್ರೀ ಗಾಯಿತ್ರಿ ಎಜುಕೇಷನಲ್, ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸುತ್ತಮುತ್ತಲಿನ ಎಲ್ಲ ಬಡಾವಣೆಯ ಬ್ರಾಹ್ಮಣ ಬಾಂಧವರಿಗಾಗಿ ಬೊಂಬೆ ಪ್ರದರ್ಶನ ಸ್ಪರ್ಧೆ ಏರ್ಪಡಿಸಿದೆ. ಆಸಕ್ತರು ಹೆಸರು ನೋಂದಾಯಿಸಲು ಮೊ. 9741837604 ಹಾಗೂ 8277476262 ಸಂಪರ್ಕಿಸಬಹುದು.
ನೃತ್ಯ ಸ್ಪರ್ಧೆ
ಮೈಸೂರು: ಮೈಸೂರು ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಅ.27ರ ಬೆಳಗ್ಗೆ 9ಕ್ಕೆ ಜಗನ್ಮೋಹನ ಅರಮನೆಯಲ್ಲಿ ದಸರಾ ಟ್ರೋಫಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಆಸಕ್ತರು ಅ.20ರೊಳಗೆ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊ. 9242049921, 9591933889 ಸಂಪರ್ಕಿಸಬಹುದು.
ಮೈಸೂರಿಗೆ ಸಿಎಂ ಆಗಮನ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿದರು.
ರಾಮಕೃಷ್ಣನಗರದಲ್ಲಿರುವ ಸ್ವಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅ.5ರ ಬೆಳಗ್ಗೆ 9.30ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಬಳಿಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ, ಸಂಜೆ 6ಕ್ಕೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು. ರಾತ್ರಿ 8ಕ್ಕೆ ಬೆಂಗಳೂರಿಗೆ ನಿರ್ಗಮಿಸುವರು.
ಪೈ. ಗಂಗಾಧರಯ್ಯ ಆಯ್ಕೆ
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅ.5 ರಂದು ನಡೆಯುವ ಕುಸ್ತಿ ಪಂದ್ಯಾವಳಿಯ ಸಾಂಪ್ರದಾಯಿಕ ಜ್ಯೋತಿ ತರಲು ಅಶೋಕಪುರಂನ ಹಿರಿಯ ಕುಸ್ತಿಪಟು ಪೈ. ಗಂಗಾಧರಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕುಸ್ತಿ ಉಪಸಮಿತಿ ಕಾರ್ಯದರ್ಶಿ ಡಿ.ರವಿಕುಮಾರ್ ಹೇಳಿದ್ದಾರೆ.
ಪ್ರತಿಭಾವಂತರಿಗೆ ಕಾರ್ಯಕ್ರಮ
ಮೈಸೂರು: ತಜ್ಞರನ್ನು ಒಳಗೊಂಡ ಪರಿಶೀಲನಾ ಸಮಿತಿಯು ಶಿಫಾರಸು ಮಾಡಿದ ಕಲಾವಿದರಿಗೆ ಹಾಗೂ 30 ಜಿಲ್ಲೆಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಕಾರ್ಯಕ್ರಮ ನೀಡಿದೆ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪಸಮಿತಿ ಸದಸ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಸಾಂಸ್ಕೃತಿಕ ಉಪಸಮಿತಿಯೂ ಕಳೆದ ಮೂರು ವರ್ಷಗಳಲ್ಲಿ ಕಾರ್ಯಕ್ರಮ ನೀಡಿದ, ಒಂದೇ ಕುಟುಂಬದ ಅಥವಾ ಸಂಸ್ಥೆಯ ಕಲಾವಿದರಿಗೆ ಬೇರೆ ಬೇರೆ ಹೆಸರಿನಲ್ಲಿ ಕಾರ್ಯಕ್ರಮ ನೀಡುವುದನ್ನು ಕೈಬಿಡಲಾಗಿದೆ. ಯಾವುದೆ ಮನವಿ ನೀಡದಂತಹ ಅರ್ಹ ಕಲಾವಿದರನ್ನು ಸಹ ಗುರುತಿಸಿದ್ದು, ಈ ಬಗ್ಗೆ ಸಾಕಷ್ಟು ಜನ ಕಲಾವಿದರ ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ರಕ್ಷಣಾ ತಂಡ ರಚಿಸಿ...
ಮೈಸೂರು: ದಸರಾ ಮಹೋತ್ಸವದಲ್ಲಿ ಮಹಿಳೆಯರ ರಕ್ಷಣೆಗಾಗಿ ಹಾಗೂ ಅಪರಾಧಗಳನ್ನು ನಿಯಂತ್ರಿಸಲು ಮಹಿಳಾ ರಕ್ಷಣಾ ತಂಡ ರಚಿಸುವಂತೆ ಅಮ್ ಆದ್ಮಿ ಪಾರ್ಟಿಯ ಸದಸ್ಯರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕರ್ನಾಟಕ ಕಾವಲುಪಡೆಗೆ ನೇಮಕ
ಮೈಸೂರು: ಕರ್ನಾಟಕ ಕಾವಲುಪಡೆಯ ಮೈಸೂರು ತಾಲೂಕು ಅಧ್ಯಕ್ಷರಾಗಿ ವರುಣ ಹೋಬಳಿಯ ಪುಟ್ಟೇಗೌಡನ ಹುಂಡಿಯ ಬಿ. ಶಿವಸ್ವಾಮಿ ನೇಮಕಗೊಂಡಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement