ವಧು- ವರರ ಸಮಾವೇಶ
ಜೆ.ಪಿ. ನಗರದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಅ.6ರ ಬೆಳಗ್ಗೆ 10ಕ್ಕೆ ತ್ರಿಮತಸ್ಥ ಬ್ರಾಹ್ಮಣರ ಮಕ್ಕಳ ವಧು- ವರರ ಸಮಾವೇಶ ಏರ್ಪಡಿಸಿದ್ದು, ಮೊ. 98453 49221 ಸಂಪರ್ಕಿಸಿರಿ.
ನಾಳೆ ಶರಣ ಸಂಗಮ
ಮೈಸೂರು: ವಿಜಯನಗರದಲ್ಲಿರುವ ಬಸವ ಭವನದಲ್ಲಿ ಅ.6ರ ಬೆಳಗ್ಗೆ 11ಕ್ಕೆ ಶರಣ ಸಂಗಮ 190ನೇ ಸರಣಿ ಉಪನ್ಯಾಸದಲ್ಲಿ ಡಾ.ಎಚ್.ಟಿ. ಶೈಲಜಾ ಅವರು ವೀರಭದ್ರನ ಲೀಲೆಗಳು ಕುರಿತು ಉಪನ್ಯಾಸ ನೀಡುವರು.
ಉಪನ್ಯಾಸಕರ ಸಭೆ
ಮೈಸೂರು- ಚಾಮರಾಜನಗರ ಜಿಲ್ಲೆ ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಪಿಎಚ್.ಡಿ., ಎನ್ಇಟಿ, ಎಸ್ಎಲ್ಇಟಿ, ಯುಜಿಸಿ, ಎಂ.ಫಿಲ್ ಪಾಸು ಮಾಡಿರುವ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಭೆಯನ್ನು ಅ.6ರ ಬೆಳಗ್ಗೆ 11ಕ್ಕೆ ಮಹಾರಾಣಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದು, ಮೊ. 94484 25774 ಸಂಪರ್ಕಿಸಬಹುದು.
ವೈದ್ಯ ತಪಾಸಣೆ
ಗಾಯತ್ರಿಪುರಂ ಎಜುಕೇಷನ್ ಸೊಸೈಟಿಯಿಂದ ಅ.6ರ ಬೆಳಗ್ಗೆ 9.30ಕ್ಕೆ ಗಾಯತ್ರಿ ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯಕೀಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 98456 66296 ಸಂಪರ್ಕಿಸಬಹುದು.
ತಪಾಸಣೆ
ಧನ್ವಂತ್ರಿ ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಮತ್ತು ಕುಟುಂಬಸ್ಥರಿಗೆ ಅ.6ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನ್ಯೂರೋಪತಿ, ಬಿ.ಪಿ. ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 91411 19651 ಸಂಪರ್ಕಿಸಬಹುದು. ಹೆಬ್ಬಾಳಿನಲ್ಲಿರುವ ರೀವರ್ ವ್ಯೂ ಆಸ್ಪತ್ರೆಯಲ್ಲಿ ಅ.6ರ ಬೆಳಗ್ಗೆ 10ಕ್ಕೆ ಗುದ ಸಂಬಂಧಿ ತೊಂದರೆಗೆ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 88844 08000 ಸಂಪರ್ಕಿಸಬಹುದು.
ಉಪನ್ಯಾಸ
ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ನಿಂದ ಅ.6ರ ಸಂಜೆ 6.30ಕ್ಕೆ ಸರಸ್ವತಿಪುರಂನಲ್ಲಿರುವ ತೆಂಗಿನ ತೋಪಿನಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಸರೋವರಗಳು ಮತ್ತು ಜೀವವೈವಿಧ್ಯ ಕುರಿತು ಉಪನ್ಯಾಸ ನೀಡುವರು. ಮೊ. 94490 47132 ಸಂಪರ್ಕಿಸಬಹುದು.