ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವನ್ಯಜೀವಿ ಸಂರಕ್ಷಣೆ: ಸಾರ್ವಜನಿಕರ ನೆರವಿಗೆ ಮನವಿ

Rashmi Kasaragodu
Updated On : 5 Oct 2013, 12:19 pm

ಕ.ಪ್ರ.ವಾರ್ತೆ  ಮೈಸೂರು  ಅ. 4
ವಿನಾಶದಂಚಿನ ವನ್ಯಜೀವಿ ಸಂರಕ್ಷಣೆಗೆ ಸಾರ್ವಜನಿಕರ ನೆರವಾಗುವಂತೆ ವನ್ಯಜೀವಿ ಸಂರಕ್ಷಣಾ ಇಲಾಖೆ ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿ ವನ್ಯಜೀವಿ ಪ್ರಕರಣದಲ್ಲಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು, ಆತನ ಮಾಹಿತಿ ಮೇರೆಗೆ ಮಹಾರಾಷ್ಟ್ರದಲ್ಲಿ, ಅಲಹಾಬಾದ್, ಉತ್ತರ ಭಾರತದ ಕಡೆಯಿಂದ 3-4 ತಂಡಗಳು ಸಂಸಾರ ಸಮೇತ ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಜಾ ಟ್ರಾಪ್ ಅಳವಡಿಸಿ ಹುಲಿ ಬೇಟೆಯಾಡುತ್ತಾರೆಂಬ ಬಗ್ಗೆ ಮಾಹಿತಿ ಬಂದಿದೆ.
ಇವರು ವನ್ಯಜೀವಿ ಸಂರಕ್ಷಿಸಲ್ಪಟ್ಟ ಇತ್ಯಾದಿ ಪ್ರಾಣಿಗಳನ್ನು ಉರುಳು ಹಾಕಿ, ಬಲೆ ಹಾಕಿ, ಪಂಜರಗಳನ್ನು ಇಟ್ಟು, ಜಾಟ್ರಾಪ್, ಕೋವಿ, ಸ್ಫೋಟಕ ವಸ್ತು, ವಿಷ ಹಾಕಿ, ವಿದ್ಯುತ್ ತಂತಿ ಬಳಸಿ ಇತ್ಯಾದಿಯಾಗಿ ಸತತ ವನ್ಯ ಪ್ರಾಣಿಗಳನ್ನು ಬೇಟೆಯಾಡಿ ಹಾಗೂ ಕೊಂದು ಮಾಂಸಕ್ಕಾಗಿ ಇಲ್ಲವೆ ಅದರ ಚರ್ಮ, ಉಗುರು, ದಂತ, ಆನೆಯ ಕೂದಲು, ಹುಲಿ ಉಗುರು, ದಂತದ ಆಭರಣ ಹಾಗೂ ವನ್ಯಜೀವಿಗಳ ಅವಶೇಷಗಳಿಂದ ಹಲವಾರು ರೀತಿಯ ಆಭರಣ, ಚಾಮರ, ವಾಕಿಂಗ್ ಸ್ಟಿಕ್, ಅಳಿಲಿನ ಕೂದಲಿನಿಂದ ಮಾಡಿದ ಬ್ರಷ್ ಇತ್ಯಾದಿಯಾಗಿ ಸಂಗ್ರಹಣೆ, ವಸ್ತುಗಳ ಬಳಕೆ, ಸಾಗಾಟ, ವ್ಯಾಪಾರ ಮಾಡುತ್ತಾರೆ.
ಅರಣ್ಯ ಪ್ರದೇಶ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಇತ್ಯಾದಿ ಕಡೆಗಳಲ್ಲಿ ಇವರು ಸಂಸಾರ ಸಮೇತ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಊರಿನ ಹೊರ ವಲಯದ ಶಾಲಾ, ಕಾಲೇಜುಗಳು ಮೈದಾನದಲ್ಲಿ ಟೆಂಟ್ಗಳನ್ನು ಹಾಕಿಕೊಂಡು ವಾಸಿಸುತ್ತಾರೆ. ಇವರು ಹುರಿಮೀಸೆ ಬಿಟ್ಟಿರುತ್ತಾರೆ. ಹಣೆಯ ಉಬ್ಬು ನೇರವಾಗಿರುತ್ತದೆ.
ಕೈತೋಳಿನಲ್ಲಿ ಅಚ್ಚೆ ಇರುತ್ತದೆ. ಕೊಳಕಲು ಉಡುಪು ಧರಿಸಿರುತ್ತಾರೆ. ಇವರು ಕಾಳಿಕಾ ದೇವತೆಯನ್ನು ಉತ್ತರಮುಖವಾಗಿ ಇಟ್ಟುಕೊಂಡು ಪೂಜೆ ಮಾಡುತ್ತಾರೆ. ಇವರು ಟೆಂಟ್ನಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಇವರು ಹಗಲು ಹೊತ್ತಿನಲ್ಲಿ ಪ್ಲಾಸ್ಟಿಕ್ ಹೂಗಳನ್ನು ಮಾರಾಟ ಮಾಡುತ್ತಾರೆ. ಇವರು ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ. 9449166477ಗೆ ಕರೆ ಮಾಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement