ಚಾಮರಾಜ ಕ್ಷೇತ್ರ ಬಿಜೆಪಿಗೆ ಪದಾಧಿಕಾರಿಗಳ ನೇಮಕ
ಕ.ಪ್ರ.ವಾರ್ತೆ ಮೈಸೂರು ಅ. 5
ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕಕ್ಕೆ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಉಪಾಧ್ಯಕ್ಷರಾಗಿ ಗೋಕುಲಂನ ಕರೀಗೌಡ, ಕೆ.ಸಿ. ನಾರಾಯಣ ಸ್ವಾಮಿ, ಕೆ.ಜಿ. ಕೊಪ್ಪಲಿನ ಎಲ್. ಬಲರಾಮ್, ನಜರ್ಬಾದ್ನ ನಾಗರಾಜು, ದೇವರಾಜ ಮೊಹಲ್ಲಾದ ಎಂ.ಭದ್ರೀಶ್, ಮಂಜುನಾಥಪುರದ ಮಂಗಳಗೌರಿ ಅವರನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ನಜರ್ಬಾದ್ನ ಎಸ್.ವಾಣೀಶ್ಕುಮಾರ್, ಪಡುವಾರಹಳ್ಳಿಯ ಚಿಕ್ಕವೆಂಕಟು, ಕಾರ್ಯದರ್ಶಿಗಳಾಗಿ ಬಿಎಂಶ್ರೀ ನಗರದ ಕೆ.ನರಸಿಂಹಮೂರ್ತಿ, ವಿಜಯನಗರದ ಅನಿಲ್ ಸದಾನಂದ, ಸರಸ್ವತಿಪುರಂನ ಕೆ.ದೇವಾನಂದ, ಹೆಬ್ಬಾಳಿನ ಎ.ಪಿ. ಮಹೇಂದ್ರಕುಮಾರ್, ಮಹದೇಶ್ವರ ಬಡಾವಣೆಯ ಮೀನಾ ಅವರನ್ನು ನೇಮಿಸಲಾಗಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ತಿಲಕ್ನಗರದ ಎಸ್.ವಿನಯ್ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಂಚೇಗೌಡನ ಕೊಪ್ಪಲಿನ ಶಿವಕುಮಾರ್, ಲಷ್ಕರ್ ಮೊಹಲ್ಲಾದ ಎಸ್.ಎನ್. ಸತ್ಯನಾರಾಯಣ್ ನೇಮಕವಾಗಿದ್ದಾರೆ. ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಕೆ.ಆರ್. ಮೊಹಲ್ಲಾದ ಲಕ್ಷ್ಮೀ ನೇಮಕಗೊಂಡಿದ್ದಾರೆ. ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಕೆ.ಜಿ. ಕೊಪ್ಪಲಿನ ಜಿ.ಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೆ. ಬಡಾವಣೆಯ ಎಂ.ಎಸ್. ಸತ್ಯಾನಂದ ವಿಟ್ಟು, ಪ.ಜಾತಿ ಘಟಕ ಅಧ್ಯಕ್ಷರಾಗಿ ಹೆಬ್ಬಾಳು ಕಾಲೋನಿಯ ಭೈರಪ್ಪ ನೇಮಕವಾಗಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೈಸೂರು: ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಯುವಕ ಸಂಘವು 2012-13ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಬಣಜಿಗ (ಬಲಿಜ) ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಜನಾಂಗದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣದ ಪತ್ರವನ್ನು ಅ.22 ರೊಳಗೆ ಸಲ್ಲಿಸಬಹುದು. ಡಾ.ಟಿ. ರಮೇಶ್, ಅಧ್ಯಕ್ಷರು, ಮೊ. 9844775678, ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ, ಮೊ. 7204064355.