ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಣಕ್ಕೆ ಜೆಎಸ್ಎಸ್ ಕೊಡುಗೆ ಅಪಾರ

Rashmi Kasaragodu
Updated On : 6 Oct 2013, 12:14 pm

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಅ. 5
ದೇಶದಲ್ಲಿ ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ಉಳಿದವರಿಗೂ ಮಾದರಿಯಾಗಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತ ಮಂಡಳಿಯ ನಿರ್ದೇಶಕ ಪ್ರೊ.ಎ.ಎನ್. ರಾಯ್ ಹೇಳಿದರು.
ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ 6ನೇ ಪದವೀಧರ ದಿನಾಚರಣೆಯ ಸಮಾರಂಭದಲ್ಲಿ ಪದವೀಧರರಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ಆತ್ಮ ವಿಶ್ವಾಸದಿಂದ ಜೀವನದಲ್ಲಿ ಮುಂದುವರಿಯಬೇಕು, ಎದುರಾಗುವ ಸೋಲುಗಳನ್ನು ಗೆಲುವಿನ ಸೋಪಾನಗಳೆಂದು ಭಾವಿಸಬೇಕು. ಕಷ್ಟಪಟ್ಟು ದುಡಿಯುವವರಿಗೆ ಫಲ ಸಿಕ್ಕೇ ಸಿಗುತ್ತದೆ. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸಿರಿ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂದಿನ ಜ್ಞಾನದ ಬಹುಮಾಧ್ಯಮಗಳ ಮೂಲಕ ನಿಮ್ಮ ಜ್ಞಾನವನ್ನು ಪ್ರಸ್ತುತಗೊಳಿಸಿಕೊಳ್ಳುತ್ತಿರಿ. ಸಾಮಾಜಿಕವಾಗಿ, ನೈತಿಕವಾಗಿ, ಬೌದ್ಧಿಕವಾಗಿ ಉತ್ತಮ ಪ್ರಜೆಗಳಾಗಿ ನೂತನ ಪದವೀಧರರು ರೂಪುಗೊಳ್ಳಬೇಕೆಂದು ತಿಳಿಸಿದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಟಿ.ಡಿ. ಸುಬ್ಬಣ್ಣ ಪ್ರತಿಜ್ಞಾವಿಧಿ ಬೋಧಿಸಿದರು. ಸ್ನಾತಕೋತ್ತರ ಪದವಿಯ ಮತ್ತು ಪದವಿ ಎಲ್ಲ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಪ್ರತಿಭಾವಂತರಿಗೆ ಪ್ರೊ.ಎ.ಎನ್. ರಾಯ್, ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್ ಹಾಗೂ ಪ್ರೊ.ಟಿ.ಡಿ. ಸುಬ್ಬಣ್ಣ ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ವಿದ್ಯಾರ್ಥಿಗಳಾದ ಕೆಂಡಗಣ್ಣ, ನಯನ್ ಆಸ್ಮೀನ್, ಕೃತ್ತಿಕಾ, ವಿಜಯರಾಜೇ ಅರಸ್, ಮಹದೇವಸ್ವಾಮಿ ಅವರು ಕಾಲೇಜಿನ ತಮ್ಮ ಅನುಭವ ಹಂಚಿಕೊಂಡರು. ವಿಪಂಚಿ ರಘುರಾಮ್ ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ.ಬಿ.ವಿ. ಸಾಂಬಶಿವಯ್ಯ ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ಡೀನ್ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement