ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಂದಿನಿ ಹಾಲು ಬಳಸಿದರೆ ರೈತರಿಗೆ ಹೆಚ್ಚು ಸಹಾಯ

Mainashree
Updated On : 6 Oct 2013, 10:42 am

ಕ.ಪ್ರ.ವಾರ್ತೆ  ಕಿತ್ತೂರು  ಅ. 6
ಸಾರ್ವಜನಿಕರು ಕೆಎಂಎಫ್ ನೀಡುವ ನಂದಿನಿ ಹಾಲನ್ನು ಹೆಚ್ಚಾಗಿ ಬಳಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಕಿತ್ತೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ 14ನೇ ಬಿಎಂಸಿ ಕೇಂದ್ರ ಕಿತ್ತೂರಿನಲ್ಲಿ ಸ್ಥಾಪಿಸಿದ್ದು, ಇದರಿಂದ 56 ಸಾವಿರ ಲೀಟರ್‌ನಷ್ಟು ಹಾಲು ಶೇಖರಣೆಯಾಗಿ ಒಕ್ಕೂಟಕ್ಕೆ ಹೋಗುತ್ತಿದೆ. ನಮ್ಮ ಜನರು ನಂದಿನಿ ಹಾಲನ್ನು ಹೆಚ್ಚು ಬಳಸಬೇಕು.
ಈ ಮೂಲಕ ರೈತರಿಗೆ ಸಹಕರಿಸಬೇಕು. ಹಾಗೆ ರೈತರೂ ಸರ್ಕಾರದ ಸವಲತ್ತನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಎಂಸಿ ಕೇಂದ್ರ ಯಂತ್ರವನ್ನು ಮೈಮುಲ್ ಅಧ್ಯಕ್ಷ ಎನ್. ಮಹದೇವಪ್ಪ ಉದ್ಘಾಟಿಸಿದರು. ಜಿಪಂ ಸದಸ್ಯೆ ಮಂಜುಳರಾಜ್, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶಬಾಬು, ಕೆಎಂಎಫ್ ನಿರ್ದೇಶಕ ಕೆ. ಉಮಾಶಂಕರ್, ನಿರ್ದೇಶಕ ಟಿ.ರಾಜೇಗೌಡ, ಈರೇಗೌಡ, ವಿಜಯಲಕ್ಷ್ಮೀ, ಸೀತಮ್ಮ ಪುಟ್ಟೇಗೌಡ, ಕೆ.ಜೆ. ವೆಂಕಟೇಶ್, ಕೆ.ಪಿ. ಜಗದೀಶ್, ಕೆ.ಟಿ. ಪ್ರಕಾಶ್, ಕೆ.ಸಿ. ಮಹೇಶ್, ಜೆ.ದಾಸೇಗೌಡ, ಕೆ.ಎಸ್. ದಿನೇಶ್, ಕೆ.ಎಸ್. ಕೃಷ್ಣೇಗೌಡ, ದಾಸಶೆಟ್ಟಿ, ಎಸ್. ದೇವರಾಜು ಇದ್ದರು. ಕೆ.ಸಿ. ಪ್ರಕಾಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement