ಮಹಾಯೋಜನೆಗೆ ಸಲಹೆ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಅ. 6
ಮೈಸೂರು- ನಂಜನಗೂಡು ಸ್ಥಳೀಯ ಯೋಜನಾಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತಯಾರಿಸಿರುವ ಮಹಾಯೋಜನೆ- 2013ಕ್ಕೆ ಮೈಸೂರು ಗ್ರಾಹಕರ ಪರಿಷತ್ತು ಕೆಲವು ಸಲಹೆ ಸೂಚನೆ ನೀಡಿದೆ.
ಈಗ ತಯಾರಿಸಿರುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಲ್ಲಿ ಉದ್ದೇಶದ ವಿರುದ್ಧದ ಪರಿಣಾಮವೇ ಉಂಟಾಗುತ್ತದೆ. ನಗರದ ಮಧ್ಯಭಾಗದ ದಟ್ಟಣೆ ಇನ್ನೂ ಹೆಚ್ಚಾಗುತ್ತದೆ. ಈ ದಟ್ಟಣೆ ಈಗ ಪ್ರಶಾಂತವಾಗಿರುವ ನಗರದ ಇತರೆ ಭಾಗಗಳಿಗೂ ಹರಡುತ್ತದೆ. ಈ ಮೂಲಕ ಪಾರಂಪರಿಕ ನಗರಿಯನ್ನು ಬೆಂಗಳೂರು ಹೋಗುತ್ತಿರುವ ದಾರಿಗೆ ತಳ್ಳಿದಂತಾಗುತ್ತದೆ ಎಂದು ಮೈಗ್ರಾಪ ಅಶೋಕ್ ಕಕ್ಕಡ್ ತಿಳಿಸಿದ್ದಾರೆ.
ಆದ್ದರಿಂದ ಮೈಗ್ರಾಪ ಸಾಕಷ್ಟು ಚರ್ಚಿಸಿ ಮಹಾಯೋಜನೆಗೆ ಸಲಹೆ ಸೂಚನೆ ನೀಡಿದೆ. ಅದರ ಅಭಿಪ್ರಾಯವನ್ನು ಢಿಢಿಢಿ.ಜಿಛ್ಛಜಛ್ಟ್ಟ್ಞಿ.್ಛ್ಟಟಣಠಛ್ಜಜಡಣಡಛಢಜ-ಟಣಡ್ಟ್ಠಜ 248335218647255 ನಲ್ಲಿ ಪ್ರಕಟಿಸಿದೆ. ಆಸಕ್ತರು ಈ ವೆಬ್ಸೈಟ್ ನೋಡಿ, ಮೈಗ್ರಾಪ ವಾದಗಳು ಒಪ್ಪಿಗೆಯಾದಲ್ಲಿ ಮಹಾಯೋಜನೆಯಲ್ಲಿ ಕೆಲವೊಂದನ್ನು ತಿದ್ದುಪಡಿ ಮಾಡಿಕೊಳ್ಳಲು ಸೂಚಿಸುವಂತೆ ಅರು ಕೋರಿದ್ದಾರೆ.