ಸುದ್ದಿ ಸಂಕ್ಷೇಪ
ಎನ್ಆರ್ ಕಪ್ ಗಾಲ್ಫ್ ಪಂದ್ಯಾವಳಿ
ಕ.ಪ್ರ.ವಾರ್ತೆ ಮೈಸೂರು ಅ. 6
ಎನ್ಆರ್ ಗ್ರೂಪ್ ಬೆಳ್ಳಿ ಮಹೋತ್ಸವ ಅಂಗವಾಗಿ ಶ್ರೀ ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಿರುವ ಎನ್ಆರ್ ಕಪ್ ಗಾಲ್ಫ್ ಪಂದ್ಯಾವಳಿಗೆ ಕಂಪನಿಯ ಮುಖ್ಯಸ್ಥ ಆರ್. ಗುರು ಚಾಲನೆ ನೀಡಿದರು.ಮುಕ್ತ ಆಹ್ವಾನಿತ ಈ ಪಂದ್ಯಾವಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಮೈಸೂರು, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಊಟಿ ಮತ್ತು ಕೊಡೈಕೆನಾಲ್ನಿಂದ ಆಗಮಿಸಿದ್ದಾರೆ. ಎರಡು ದಿನಗಳ ಈ ಪಂದ್ಯಾವಳಿಯಲ್ಲಿ ಗಾಲ್ಫ್, ಲೇಡಿ ಗಾಲ್ಫ್, ಜೂನಿಯರ್ ಗಾಲ್ಫ್ ಮತ್ತು ಸೀನಿಯರ್ ಗಾಲ್ಫ್ ಸೇರಿದಂತೆ 10 ವಿಭಾಗಗಳಿವೆ.
ವ್ಯವಸ್ಥಾಪಕ ಪಾಲುದಾರ ಆರ್.ಎನ್. ಮೂರ್ತಿ, ಕ್ಲಬ್ನ ಅಧ್ಯಕ್ಷ ಲಕ್ಷ್ಮಿನಾರಾಯಣ ಬಾಬು ಇದ್ದರು.
ಅಭಿಜ್ಞಾನ್ ಉತ್ಸವ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿಯಲ್ಲಿ ನಿರ್ವಹಣಾ ವಿಷಯದ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಅಭಿಜ್ಞಾನ್- 2013 ನಿರ್ವಹಣಾ ಉತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಎಸ್ಡಿಎಂ ಐಎಂಡಿ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್ ಮಾತನಾಡಿ, ಜೀವನ ಸವಾಲುಗಳಿಂದ ಕೂಡಿರುತ್ತದೆ. ನಾವು ನಮ್ಮ ಸಾಮರ್ಥ್ಯ ಹಾಗೂ ತಾಂತ್ರಿಕ ಕೌಶಲ್ಯದಿಂದ ಸೈದ್ಧಾಂತಿಕವಾಗಿ ಆ ಸವಾಲುಗಳನ್ನು ಎದುರಿಸಬೇಕು. ಜತೆಗೆ ಶೈಕ್ಷಣಿಕ ಜ್ಞಾನ, ಆಶಾದಾಯಕ ಮನೋಭಾವ ಹಾಗೂ ಕ್ರಿಯಾಶೀಲತೆಯಿಂದ ಯಾವುದೇ ಕೆಲಸದಲ್ಲಿ ಪಾಲ್ಗೊಂಡಾಗ ಯಶಸ್ಸು ಸಾಧಿಸಬಹುದು ಎಂದರು. ಡಾ.ನೀತು ಗಣಪತಿ, ಪ್ರೊ.ಎನ್.ಆರ್. ಗೋವಿಂದಶರ್ಮ, ಮೊಹಮ್ಮದ್ ಶಬ್ಬಾಜ್ ಇದ್ದರು. ನೀತು ಪ್ರಾರ್ಥಸಿದರು. ಗೀತಿಕಾ ನಿರೂಪಿಸಿದರು.
ಸ್ಕಾಲರ್ಶಿಪ್ಗೆ ಅರ್ಜಿ ಆಹ್ವಾನ
ಮಹಾರಾಣಿ ಪದವಿಪೂರ್ವ ಕಾಲೇಜಿನ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅ. 15 ರೊಳಗೆ ಇಲಾಖಾ ವೆಬ್ಸೈಟ್ ಡಿಡಿಠ///್ಞಛ್ಠಜಠಛಡಡ.್ಛ್ಜ್ಜ.್ಜ್ಟಢ.್ಝಟಿ ನಲ್ಲಿ ಅರ್ಜಿ ಸಲ್ಲಿಸಬಹುದು. ದೂ.0821- 2426087 ಸಂಪರ್ಕಿಸಬಹುದು.
ಅಂಧ ಬಾಲಕಿಯರಿಗೆ ಅರಿವು ಕಾರ್ಯಕ್ರಮ
ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ದಿ ವಿಷ್ಯುಲ್ ಹ್ಯಾಂಡಿಕ್ಯಾಪ್ಡ್ ಹಾಗೂ ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಸಂಯುಕ್ತಾಶ್ರಯದಲ್ಲಿ ಅ.28 ರಂದು ಅಂಧ ಬಾಲಕಿಯರಿಗೆ ಪ್ರಜನಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 14 ರಿಂದ 20 ವರ್ಷದ ಅಂತರವಿರುವ ಅಂಧ ಬಾಲಕಿಯರು ಭಾಗವಹಿಸಬಹುದು. ಆಸಕ್ತರು ಎಸ್ಜೆಸಿಇಯ ಜೆಎಸ್ಎಸ್ ಪಾಲಿಟೆಕ್ನಿಕ್ನ ಐಐಪಿ ಘಟಕದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 94484 34270 ಸಂಪರ್ಕಿಸಬಹುದು.
ಇಂಗ್ಲಿಷ್ ತರಬೇತಿ
ಮೈವಿವಿ ಸಾಮಾರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೇವಾ ಕೇಂದ್ರದಲ್ಲಿ ವಿಶೇಷ ಇಂಗ್ಲಿಷ್ ಸಂವಹನ ತರಗತಿ ಆರಂಭಿಸಲಿದ್ದು, ಆಸಕ್ತರು ಅ.19 ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ತಿಳಿಸಿದ್ದಾರೆ. 0821-2419405 ಸಂಪರ್ಕಿಸಿ.