ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 6 Oct 2013, 10:46 am

ನಾಳೆ ಪುಟ್ಟಣ್ಣಯ್ಯಗೆ ಸನ್ಮಾನ ಕಾರ್ಯಕ್ರಮ
ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಕರ್ತರ ಸಭೆ ಅ.8 ರಂದು  ಬೆಳಗ್ಗೆ 11ಕ್ಕೆ ಹಾಗೂ ಶಾಸಕ ಕೆಎಸ್. ಪುಟ್ಟಣ್ಣಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಮಧ್ಯಾಹ್ನ 3ಕ್ಕೆ ಮಾನಸ ಗಂಗೋತ್ರಿ ಲಲಿತಕಲಾ ಕಾಲೇಜಿನ ರಂಗಮಂದಿರದಲ್ಲಿ ನಡೆಯಲಿದೆ. ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ವಿದ್ಯಾಸಾಗರ್ ಮೊದಲಾದವರು ಭಾಗವಹಿಸುವರು.
ಬಾಬಾ ಅಸೋರಾಂ ನಿರಪರಾಧಿ
ಮೈಸೂರು: ಸಂತ ಬಾಬಾ ಅಸೋರಾಂ ಅವರು ನಿರಾಪರಾಧಿಯಾಗಿದ್ದು, ಅವರ ಮೇಲೆ ಕಿಡಿಗೇಡಿಗಳು ಇಲ್ಲ ಸಲ್ಲದ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಭಾರತ ಜಾಗೃತಿ ಮೋರ್ಚಾದ ಮಾಧ್ಯಮ ಪ್ರಬಾರಿ ಅಭಯ್ ವರ್ದಕ್ ಆಕ್ರೋಶ ವ್ಯಕ್ತಪಡಿಸಿದರು. ಬಾಬಾ ಅಸೋರಾಂ ಹಿಂದೂ ಧರ್ಮದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ವಿನಾಕಾರಣ ಹಿಂದೂಗಳನ್ನು ಹಿಂಸಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರಗೊಳ್ಳಬೇಕಿದೆ. 50 ವರ್ಷಗಳಿಂದ ಸದಾಚಾರ, ಭಕ್ತಿ ಮತ್ತು ಆಧ್ಯಾತ್ಮದ ಪ್ರಚಾರ ಪ್ರಸಾರ ಮಾಡಿದ ಅಸೋರಾಂ ಅವರ ಬಿಡುಗಡೆಗೆ ಒತ್ತಾಯಿಸಬೇಕಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು. ಆಶ್ರಮ ವಾಸಿಗಳಾದ ಅಶೋಕ್, ಅಜಯ್ ಇದ್ದರು.
ವಾಹನ ನಿಲುಗಡೆ ನಿರ್ಬಂಧ
ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅ.7 ರಿಂದ 12 ರವರೆಗೆ ನಡೆಯುವ ಯುವ ದಸರಾ ಕಾರ್ಯಕ್ರಮದ ಸಂಬಂಧ ವಾಹನಗಳ ನಿಲುಗಡೆ ಮತ್ತು ವಾಹನದ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಏಕಲವ್ಯ ವೃತ್ತದಿಂದ ಉತ್ತರಕ್ಕೆ ಕೆ.ಆರ್. ಬುಲೇವಾರ್ಡ್ ರಸ್ತೆಯಲ್ಲಿ ಕೌಟಿಲ್ಯ ವೃತ್ತದವರೆಗೆ ಗಣ್ಯರ ವಾಹನಗಳನ್ನು ಹೊರತುಪಡಿಸಿ ಎಲ್ಲ ಮಾದರಿಯ ವಾಹನಗಳ ಸಂಚಾರ ಮತ್ತು ನಿಲುಗಡೆ ನಿರ್ಬಂಧಿಸಲಾಗಿದೆ. ಏಕಲವ್ಯ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ಚಾಮರಾಜ ಜೋಡಿ ರಸ್ತೆಯಲ್ಲಿ ಎಲ್ಲ ಮಾದರಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ. ಗಣ್ಯರು ಮತ್ತು ಅತಿಗಣ್ಯರ ವಾಹನಗಳಿಗೆ ಮಹಾರಾಜ ಕಾಲೇಜು ಮೈದಾನದ ಸಮಾರಂಭ ಸ್ಥಳದ ವೇದಿಕೆಯ ಹಿಂಭಾಗದಲ್ಲಿರುವ ವ್ಯಾಯಾಮ ಶಾಲೆಯ ಖಾಲಿ ಸ್ಥಳ, ವಿಶೇಷ ಆಹ್ವಾನಿತರ ವಾಹನಗಳಿಗೆ ಹಾಗೂ ಮಾಧ್ಯಮದವರಿಗೆ ಮತ್ತು ಗೋಲ್ಡ್‌ಕಾರ್ಡ್ ಹೊಂದಿರುವವರಿಗೆ ಮಹಾರಾಜ ಕಾಲೇಜು ಮೈದಾನದಲ್ಲಿನ ಜಿಮ್ನಾಸಿಯಂ ಕಟ್ಟಡದ ಹಿಂಭಾಗ, ಹಾಕಿ ಮೈದಾನ ಹಾಗೂ ಟೆನಿಸ್ ಕೋರ್ಟ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅರಸು ಬೋರ್ಡಿಂಗ್ ಶಾಲೆ ಮೈದಾನದಲ್ಲಿ ಕಾರುಗಳ (ಎಲ್‌ಎಂವಿ) ನಿಲುಗಡೆ, ಕೆ.ಆರ್. ಬುಲಾವರ್ಡ್ ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ಜಿಪಂ ಕಚೇರಿ ದ್ವಾರದ ಜಂಕ್ಷನ್‌ವರೆಗೆ, ಮಹಾರಾಜ ಮತ್ತು ಯುವರಾಜ ಕಾಲೇಜು ಆವರಣದಲ್ಲಿ ದ್ವಿಚಕ್ರವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಬರುವ ಸಾರ್ವಜನಿಕರ ಮತ್ತು ಗಣ್ಯರು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವಂತೆ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement