ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಫ್ ಮ್ಯಾರಥಾನ್‌ಗೆ ಚಾಲನೆ

Mainashree
Updated On : 6 Oct 2013, 10:45 am

ಕ.ಪ್ರ.ವಾರ್ತೆ  ಮೈಸೂರು  ಅ. 6
ದಸರಾ ಮಹೋತ್ಸವದ ರಾಜ್ಯ ದಸರಾ ಕ್ರೀಡಾಕೂಟದ ಅಂಗವಾಗಿ ಆಯೋಜಿಸಿದ್ದ 9ನೇ ಮೈಸೂರು ಹಾಫ್ ಮ್ಯಾರಥಾನ್ ಮತ್ತು ರಸ್ತೆ ಓಟದ ಸ್ಪರ್ಧೆ ಭಾನುವಾರ ನಡೆಯಿತು.
ಅರಮನೆಯ ಜಯಮಾರ್ತಾಂಡ ದ್ವಾರದ ಆವರಣದಲ್ಲಿ ಆಯೋಜಿಸಿದ್ದ ಈ ಹಾಫ್ ಮ್ಯಾರಥಾನ್‌ಗೆ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು. 21.1 ಕಿ.ಮೀ., 12 ಕಿ.ಮೀ, 6 ಕಿ.ಮೀ ಮತ್ತು 3 ಕಿ.ಮೀ ಓಟದ ಈ ಸ್ಪರ್ಧೆಯಲ್ಲಿ ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಾಗವಹಿಸಿದ್ದರು.
ನಗರದ ವಿವಿಧ ಶಾಲಾ ಕಾಲೇಜಿನ ಬಾಲಕರು, ಬಾಲಕಿಯರು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದರು. 21.1 ಕಿ.ಮೀ ಪುರುಷ ಮತ್ತು ಮಹಿಳೆಯರ ಹಾಫ್ ಮ್ಯಾರಥಾನ್ ಓಟವು ಜಯಮಾರ್ತಾಂಡ ದ್ವಾರದಿಂದ ಆರಂಭವಾಗಿ ಗನ್‌ಹೌಸ್ ವೃತ್ತ, ಅಗ್ರಹಾರ ವೃತ್ತ, ಸಿದ್ದಪ್ಪ ವೃತ್ತ, ನಂಜುಮಳಿಗೆ ವೃತ್ತ, ಎಸ್‌ಡಿಎಂ ಕಾಲೇಜು ವೃತ್ತ, ಅಶೋಕ ವೃತ್ತ, ರೇಲ್ವೆ ಅಂಡರ್ ಬ್ರಿಡ್ಜ್, ಅಪೋಲೋ ಆಸ್ಪತ್ರೆ, ಕಾವೇರಿ ಶಾಲೆ, ಸೌಗಂಧಿಕ ಉದ್ಯಾನ, ಕುವೆಂಪುನಗರ ಕಾಂಪ್ಲೆಕ್ಸ್ ವೃತ್ತ, ಅಂದೋಲನ ವೃತ್ತ, ಸೋಮಾನಿ ಕಾಲೇಜು ವೃತ್ತ, ಕುಕ್ಕರಹಳ್ಳಿ ಕೆರೆ, ಕಲಾಮಂದಿರ, ಮೆಟ್ರೋಪೋಲ್ ವೃತ್ತ, ಮೈಸೂರು ಕೇಂದ್ರ ರೇಲ್ವೆ ನಿಲ್ದಾಣ, ಕೆ.ಆರ್. ಆಸ್ಪತ್ರೆ, ಟಿಪ್ಪು ವೃತ್ತ, ಎಲ್‌ಐಸಿ ವೃತ್ತ, ಸರ್ಕಾರಿ ಅತಿಥಿ ಗೃಹ, ನಜರ್‌ಬಾದ್ ವೃತ್ತ, ಹಾಡಿಂಗ್ ವೃತ್ತದ ಮೂಲಕ ಅರಮನೆ ತಲುಪಿತು.
ಕಾಲೇಜು ಬಾಲಕರಿಗೆ ಏರ್ಪಡಿಸಿದ್ದ 12 ಕಿ.ಮೀ ಓಟದ ಸ್ಪರ್ಧೆಯು ಜಯಮಾರ್ತಾಂಡ ದ್ವಾರದಿಂದ ಗನ್‌ಹೌಸ್ ವೃತ್ತ, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ, ಎಸ್‌ಡಿಎಂ ಕಾಲೇಜು ವೃತ್ತ, ಕಾವೇರಿ ಶಾಲೆ ವೃತ್ತ, ಸೌಗಂದಿಕ ಉದ್ಯಾನವನ, ಸೋಮಾನಿ ಕಾಲೇಜು ವೃತ್ತ, ಕುಕ್ಕರಹಳ್ಳಿ ಕೆರೆ ವೃತ್ತ, ಕಲಾಮಂದಿರ, ಮೆಟ್ರೋ ಪೋಲ್ ವೃತ್ತ, ದೇವರಾಜ ಅರಸು ರಸ್ತೆ ವೃತ್ತ, ಕೆ.ಆರ್. ವೃತ್ತ, ಹಾಡಿಂಗ್ ವೃತ್ತದ ಮೂಲಕ ಅರಮನೆ ಪೂರ್ವ ದ್ವಾರಕ್ಕೆ ಸೇರಿತು.
ಕಾಲೇಜು ಬಾಲಕಿಯರು ಮತ್ತು ಶಾಲಾ ಬಾಲಕರ 6 ಕಿ.ಮೀ ಓಟವು ಗನ್‌ಹೌಸ್ ವೃತ್ತ, ಅಗ್ರಹಾರ, ನಂಜುಮಳಿಗೆ, ಎಸ್‌ಡಿಎಂ ಕಾಲೇಜು ವೃತ್ತ, ಆರ್‌ಟಿಒ, ರಾಮಸ್ವಾಮಿ ವೃತ್ತ, ಎಂಡಿಎ ವೃತ್ತ, ದೇವರಾಜ ಅರಸು ರಸ್ತೆ, ಕೆ.ಆರ್. ವೃತ್ತ, ಅರಮನೆ ಉತ್ತರ ದ್ವಾರ ವೃತ್ತ, ಹಾರ್ಡಿಂಗ್ ವೃತ್ತದ ಮೂಲಕ ಅರಮನೆ ತಲುಪಿತು.
ಶಾಲಾ ಬಾಲಕಿಯರು ಮತ್ತು ದಸರಾ ಮನೋರಂಜನಾ ಓಟವು (3 ಕಿ.ಮೀ) ಗನ್‌ಹೌಸ್ ವೃತ್ತ, ಕೆ.ಆರ್. ವೃತ್ತ, ಅರಮನೆ ಉತ್ತರ ದ್ವಾರ ವೃತ್ತ, ಹಾಡಿಂಗ್ ವೃತ್ತದ ಮೂಲಕ ಅರಮನೆ ಪೂರ್ವ ದ್ವಾರ ತಲುಪಿತು.
ಅಂತಾರಾಷ್ಟ್ರೀಯ ಅಥ್ಲೀಟ್ ಮೊಹಮ್ಮದ್ ಅರ್ಹದ್, ಸಾಂಸ್ಕೃತಿಕ ಉಪ ಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್‌ಕುಮಾರ್, ಕ್ರೀಡಾ ಉಪ ಸಮಿತಿ ಅಧ್ಯಕ್ಷ ಎಂ.ಎಸ್. ಸತ್ಯನಾರಾಯಣ, ವಿಶೇಷ ಆಹ್ವಾನಿತ ಡಾ.ಸಿ. ಕೃಷ್ಣ, ಕಾರ್ಯದರ್ಶಿ ಕೆ. ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement