1.87 ಲಕ್ಷ ಸಂಗ್ರಹ
ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಹುಂಡಿಯಲ್ಲಿ 1.87 ಲಕ್ಷ ಸಂಗ್ರಹವಾಗಿದ್ದು, ಆರು ತಿಂಗಳ ಅವಧಿಯಲ್ಲಿ ಈ ಹಣ ಸಂಗ್ರಹವಾಗಿದೆ ಎಂದು ಉಪ ತಹಸೀಲ್ದಾರ್ ತಿಮ್ಮಯ್ಯ ಹೇಳಿದ್ದಾರೆ. ದೇವಾಲಯದ ಆವರಣದಲ್ಲಿ ಸೋಮವಾರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಎಣಿಕೆ ಮಾಡಲಾಯಿತು.
ವಾಹನ ಡಿಕ್ಕಿ: ವ್ಯಕ್ತಿ ಸಾವು
ಪಿರಿಯಾಪಟ್ಟಣ: ರಸ್ತೆ ದಾಟುತ್ತಿದ್ದ ಲಾರಿ ಚಾಲಕನಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ತಾತನಹಳ್ಳಿ ಗೇಟ್ಬಳಿ ಭಾನುವಾರ ರಾತ್ರಿ ಜರುಗಿದೆ. ಪಟ್ಟಣದ ಟ್ಯಾಂಕ್ ಬಡಾವಣೆಯ ನಿವಾಸಿ ಶಬೀರ್ (35) ಮೃತ ವ್ಯಕ್ತಿ. ಶಬೀರ್ ತಾತನಹಳ್ಳಿ ಗೇಟ್ ಬಳಿಯ ರಸ್ತೆ ಬದಿಯಲ್ಲಿ ತನ್ನ ಲಾರಿಯಿಂದ ಕೆಳಗಿಳಿದು, ನಂತರ ಲಾರಿಗೆ ಹತ್ತುವ ವೇಳೆ ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ತಕ್ಷಣ ಶಬ್ಬೀರ್ನನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಆಧಾರ್ ಕೇಂದ್ರದಲ್ಲಿ ಕಳವು
ಪಿರಿಯಾಪಟ್ಟಣ: ಆಧಾರ್ಕಾರ್ಡ್ಗೆ ಫೋಟೋ ತೆಗೆಯಲು ಇಡಲಾಗಿದ್ದ ಕಂಪ್ಯೂಟರ್ ಸೇರಿದಂತೆ ಇತರೆ ಉಪಕರಣಗಳು ಕಳ್ಳತನವಾಗಿರುವ ಘಟನೆ ಜರುಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಕೆಲವು ತಿಂಗಳಿಂದ ಆಧಾರ್ ಕಾರ್ಡ್ಗೆ ಫೋಟೋ ತೆಗೆಯಲಾಗುತ್ತಿದ್ದು, ಶನಿವಾರ ರಾತ್ರಿ ಕಳ್ಳರು ಸಮುದಾಯ ಭವನದ ಬಾಗಿಲು ಮುರಿದು 2 ಲ್ಯಾಪ್ಟಾಪ್, ಒಂದು ಕ್ಯಾಮರಾ ಹಾಗೂ ಮಾನಿಟರ್ಗಳನ್ನು ಕಳ್ಳತನ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.