ಜೈವಿಕ ಇಂಧನ ತಂತ್ರಜ್ಞಾನ ಕಾರ್ಯಾಗಾರ
ಕ.ಪ್ರ.ವಾರ್ತೆ ಮೈಸೂರು ಅ. 7
ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜು ಅ.10 ಮತ್ತು 11 ರಂದು ಜೈವಿಕ ಇಂಧನ ತಂತ್ರಜ್ಞಾನಗಳ ಕುರಿತು ಕಾರ್ಯಾಗಾರ ಆಯೋಜಿಸಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಜೈವಿಕ ಇಂಧನದ ಬಗೆಗಿನ ಪ್ರಸ್ತುತ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲಾಗುವುದು. ಭಾಗವಹಿಸುವವರು ಜೈವಿಕ ಇಂಧನಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಕಾರ್ಯಾಗಾರದಲ್ಲಿ ಜೈವಿಕ ಇಂಧನಗಳ ಗುಣಮಟ್ಟ ಪರೀಕ್ಷೆ ಮತ್ತು ಜೈವಿಕ ಇಂಧನ ನೀತಿಗಳ ಬಗ್ಗೆ ಉಪನ್ಯಾಸ ನೀಡಲಾಗುವುದು.
ಕಾರ್ಯಾಗಾರದಲ್ಲಿ ಪುನರ್ ಬಳಸಬಹುದಾದ ತಾಂತ್ರಿಕತೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಉದ್ಯಮಿಗಳು, ವಿದ್ಯಾಸಂಸ್ಥೆಗಳು, ವಿದ್ಯಾರ್ಥಿಗಳು, ಎನ್ಜಿಒಗಳು ಭಾಗವಹಿಸಿ ಇದರ ಉಪಯೋಗ ಪಡೆಯಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಎನ್ಐಇ ಕಾಲೇಜು, ಮಾನಂದವಾಡಿ ರಸ್ತೆ, ಮೈಸೂರು. ಅಥವಾ ದೂ. 0821- 4004914 ಸಂಪರ್ಕಿಸಬಹುದು.