ನಾನಾ ತರಬೇತಿಗೆ ಅರ್ಜಿ ಆಹ್ವಾನ
ಕ.ಪ್ರ.ವಾರ್ತೆ ಮೈಸೂರು ಅ. 7
ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಬ್ಯಾಂಕುಗಳ ಪ್ರೊಬೇಷನರಿ ಅಧಿಕಾರಿಗಳು ಮತ್ತು ಕ್ಲರಿಕಲ್ ಹುದ್ದೆಗೆ ಉಚಿತ ತರಬೇತಿ ಶಿಬಿರ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ದೂ.0821- 2512065 ಸಂಪರ್ಕಿಸಬಹುದು.
ವಿದ್ಯಾಭವನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಯುಪಿಎಸ್ಸಿ, ಕೆಪಿಎಸ್ಸಿ ಆಯೋಜಿಸುವ ಐಎಎಸ್ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ದೀರ್ಘಾವಧಿ ತರಬೇತಿ ಆರಂಭಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಡಾ.ಎ.ಎನ್. ಸೋಮಶೇಖರ್ ಮೊ. 9448938469 ಸಂಪರ್ಕಿಸಬಹುದು.
ಜ್ಞಾನಜ್ಯೋತಿ ಸಂಸ್ಥೆಯು ವಿವಿಧ ತರಬೇತಿ ಶಿಬಿರ ಆಯೋಜಿಸಿದೆ. ಟೈಲರಿಂಗ್, ಕಂಪ್ಯೂಟರ್, ಬ್ಯೂಟಿಷಿಯನ್, ಕೃತಕ ಆಭರಣಗಳ ತಯಾರಿಕೆ ಮತ್ತು ಫ್ಯಾಷನ್ ಡಿಸೈನಿಂಗ್ ಕುರಿತು ತರಬೇತಿ ಆಯೋಜಿಸಿದೆ. 14 ವರ್ಷ ಮೇಲ್ಪಟ್ಟ ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಹಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ. 7829892555 ಸಂಪರ್ಕಿಸಬಹುದು. ಪ್ರೈಂ ಅಕಾಡೆಮಿ ಸಂಸ್ಥೆಯು ಸಿಎ- ಐಪಿಸಿಸಿ ಗುಂಪು 1 ಮತ್ತು 2 ತರಗತಿಯನ್ನು ನಗರದಲ್ಲಿ ತೆರೆಯುತ್ತಿದೆ. ನುರಿತ ತರಬೇತುದಾರರಾದ ಎಂ.ಪಿ. ವಿಜಯಕುಮಾರ್, ಪಟ್ಟಾಭಿರಾಮ್, ಭೂಪತಿ ಮುಂತಾದ ಪರಿಣಿತರು ತರಬೇತಿ ನೀಡುವರು. ಆಸಕ್ತರು ಪ್ರೈಂ ಅಕಾಡೆಮಿ, ನಂ.20, 1ನೇ ಮುಖ್ಯರಸ್ತೆ, 4ನೇ ಹಂತ, ಟಿ.ಕೆ. ಬಡಾವಣೆ, ಮೈಸೂರು- 09 ಅಥವಾ ಮೊ. 9538880856 ಸಂಪರ್ಕಿಸಬಹುದು.