ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸದಸ್ಯತ್ವ ಕಾರ್ಡ್ ಪಡೆಯಲು ಸೂಚನೆ

Rashmi Kasaragodu
Updated On : 8 Oct 2013, 12:51 pm

ಮೈಸೂರು: ರಾಜ್ಯ ಒಕ್ಕಲಿಗ ಸಂಘದ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿ, ಸದಸ್ಯತ್ವದ ಕಾರ್ಡ್ ಪಡೆಯದವರು ಕೂಡಲೆ ವಿಜಯನಗರದ ಸಂಘದ ಕಚೇರಿಗೆ ಭೇಟಿ ನೀಡಿ ಅರ್ಜಿಯ ನಕಲು ಪ್ರತಿ, ಬ್ಯಾಂಕ್ ಚಲನ್ ಅಥವಾ ಸಂಘದಿಂದ ನಿಮ್ಮ ವಿಳಾಸಕ್ಕೆ ಬಂದಿರುವ ಯಾವುದಾದರೂ ಕಾಗದ ಅಥವಾ ಪತ್ರವನ್ನು ನೀಡಿ ಸದಸ್ಯತ್ವ ಕಾರ್ಡ್ ಪಡೆಯಬೇಕು ಎಂದು ಕೆ. ಶೈಲಕುಮಾರ್ ಮನವಿ ಮಾಡಿದ್ದಾರೆ.
23ಕ್ಕೆ ರಾಷ್ಟ್ರೀಯ ವಿಚಾರಗೋಷ್ಠಿ
ಮೈಸೂರು: ಬುದ್ಧಭೂಮಿ ಬಳಗ ಮತ್ತು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದೊಂದಿಗೆ ಕನ್ನಡ ಸಂಸ್ಕೃತಿ ಪರಂಪರೆ ಮತ್ತು ಆಧುನಿಕತೆಯ ಅನುಸಂಧಾನ ಕುರಿತು ಅ.23 ರಂದು ಸಂಸ್ಥೆಯ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ವಿಚಾರ ಸಂಕಿರಣದಲ್ಲಿ ಅಧ್ಯಯನಶೀಲ ಪ್ರಬಂಧಗಳನ್ನು ಮಂಡಿಸಲು ಸ್ನಾತಕ ವಿದ್ಯಾರ್ಥಿಗಳು ಪದವೀಧರರು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಮುಕ್ತ ಅವಕಾಶವಿದೆ. ಈ ವಿಚಾರ ಸಂಕಿರಣದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟಣೆ ಆಗಲಿದೆ. ಆದ್ದರಿಂದ ಸಮಾವೇಶದಲ್ಲಿ ಮಂಡಿಸುವ ಪ್ರಬಂಧವನ್ನು ಬರೆಹ ರೂಪದಲ್ಲಿ ಕಡ್ಡಾಯವಾಗಿ ನೀಡಬೇಕು. ಹೊಂಬಯ್ಯ ಹೊನ್ನಲಗೆರೆ, ಮೊ. 9964018112, ಪ್ರಸನ್ನ ನಂಜಾಪುರ, ಮೊ. 8050986844 ಸಂಪರ್ಕಿಸಬಹುದು.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಮೈಸೂರು: ನಗರದ ಬೋಗಾದಿಯ ಬಸವ ಬಳಗದ ವೀರಶೈವ ರುದ್ರಭೂಮಿ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚಹರೆ ಇಂತಿದೆ- 25 ರಿಂದ 35 ವರ್ಷ, 5.2 ಅಡಿ ಎತ್ತರ, ದುಂಡು ಮುಖ, ದೃಢಕಾಯ ಶರೀರ, ಬಲದ ಕೈಯನ್ನು ಪ್ರಾಣಿಗಳು ತಿಂದಿವೆ. ವಾರಸುದಾರರು ಇದ್ದಲ್ಲಿ ಸರಸ್ವತಿಪುರಂ ಠಾಣೆ ದೂ. 0821- 2418123 ಅಥವಾ ಕಂಟ್ರೋಲ್ ರೂಂ ದೂ. 2418339 ಸಂಪರ್ಕಿಸಬಹುದು.
ನೋಂದಣಿಗೆ ಸೂಚನೆ
ಮೈಸೂರು: ಶಂಕರ ವಾಹಿನಿಯು ಹಿಂದೂ ಧರ್ಮದ ಎಲ್ಲಾ ಜಾತಿ- ಉಪಜಾತಿಗಳ ವಧು- ವರರ ನೋಂದಣಿ ಮತ್ತು ಹಿಂದೂ ವರರ ವಿವರ ಪಡೆಯಬಹುದು. ಮೀಡಿಯಾ ಪಾಯಿಂಟ್, ನಂ.1223, ರಿಲಯನ್ಸ್ ವರ್ಲ್ಡ್ ಹಿಂಭಾಗ, ದೇವರಾಜ ಅರಸು ರಸ್ತೆ, ಮೈಸೂರು- 01 ಅಥವಾ ಹೆಚ್ಚಿನ ಮಾಹಿತಿಗೆ ದೂ. 0821- 4247788 ಸಂಪರ್ಕಿಸಬಹುದು.
ಗಾಂಧಿ ಜಯಂತಿ
ಮೈಸೂರು: ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ 144ನೇ ಗಾಂಧಿ ಜಯಂತಿ ಆಚರಿಸಲಾಯಿತು. ಜೆಎಸ್ಎಸ್ ಆಸ್ಪತ್ರೆಯ ಡಾ.ಶಶಿಕಲಾ ರಾಮನಾಥ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಂಡಿಎಂ ವಿದ್ಯಾರ್ಥಿಗಳು ಗಾಂಧೀಜಿಯ ಜೀವನ ಹಾಗೂ ಮೌಲ್ಯಗಳ ಆಧಾರಿತ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದರು.
ಆರೋಗ್ಯ ತಪಾಸಣೆ
ಮೈಸೂರು: ಲಕ್ಷ್ಮೀಪುರಂನ ಸೀತಾರಂಗ ಹೆಲ್ತ್ಕೇರ್ ಕಾಂಪ್ಲೆಕ್ಸ್ನಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ಅ.9ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ವರೆಗೆ ಮಕ್ಕಳಿಗಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದೆ. ದೂ.4276999 ಸಂಪರ್ಕಿಸಿ.
ಸಹಾಯ ಚೇತನ
ಮೈಸೂರು: ರಾಜ್ಯ ಮಟ್ಟದಲ್ಲಿ ನಿವೃತ್ತರಾಗಿ ಮತ್ತು ಕೆಲಸ ಮಾಡಲು ಶಕ್ತರಿರುವರಿಗೆ ಸಹಾಯ ಚೇತನವು ಉದ್ಯೋಗಾವಕಾಶ ಕಲ್ಪಿಸಲಿದೆ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೆ ತಾವು ಇಚ್ಛಿಸಿದ ಉದ್ಯೋಗಾವಕಾಶ ಕಲ್ಪಿಸಿಕೊಡುವ ಆ ಯೋಜನೆಯಲ್ಲಿ ನಿವೃತ್ತ ಉಪಾಧ್ಯಾಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ಸ್ವವಿವರ, ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಚೇತನ ಬುಕ್ ಹೌಸ್, ಅಂಜನಾದ್ರಿ, ರೇಣುಕಾಚಾರ್ಯ ದೇವಸ್ಥಾನ ರಸ್ತೆ, ಮೈಸೂರು- 24 ಈ ವಿಳಾಸಕ್ಕೆ ಕಳುಹಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement