ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿದ್ದನಗೌಡರ್ಗೆ ಡಾಕ್ಟರೇಟ್

Rashmi Kasaragodu
Updated On : 8 Oct 2013, 12:48 pm

ಮೈಸೂರು: ಡಾ.ಎಂ.ಪಿ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಚ್.ಎಂ. ಸಿದ್ಧನ ಗೌಡರ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಶಿಲ್ಲೊ ತಂತ್ರಜ್ಞಾನ ಖರೀದಿ
ಮೈಸೂರು: ರೀಟೆಲ್ ಸೇವಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಹಾಗೂ ಐಟಿ ಸೇವಾ ಪ್ರಶಸ್ತಿ ಪಡೆದ ಮೈಸೂರಿನ ಎಸ್ಪಿಐ ಸಂಸ್ಥೆಯು ಶಿಲ್ಲೊ ತಂತ್ರಜ್ಞಾನ ಖರೀದಿಸಿದೆ. ಶಿಲ್ಲೊ ತಂತ್ರಜ್ಞಾನವು ರಿಟೇಲರ್ಸ್ ಹಾಗೂ ಸಪ್ಲೈಯರ್ಸ್ಗಳ ಮೌಲ್ಯಮಾಪನ ಮಾಡಲು ಸಾಫ್ಟ್ವೇರ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ಮೂಲಕ ಎಸ್ಪಿಐ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯವಾಗಲಿದೆ ಎಂದು ಸಂಸ್ಥೆಯ ಸಿಇಒ ಸಿದ್ ಮುಖರ್ಜಿ ತಿಳಿಸಿದ್ದಾರೆ.
ಪ್ರಚವನ
ಮೈಸೂರು: ನವರಾತ್ರಿಯ ಅಂಗವಾಗಿ ಡಿ.ಸುಬ್ಬಯ್ಯ ರಸ್ತೆಯ 2ನೇ ಕ್ರಾಸ್ನ ಡಾ.ಕೆ.ಎನ್. ಗಡಚಿಂತಿ ಅವರ ನಿವಾಸದಲ್ಲಿ ಅ.9 ರಿಂದ 13 ರವರೆಗೆ ಪ್ರತಿದಿನ ಸಂಜೆ 5.30 ರಿಂದ 7.30 ರವರೆಗೆ ವಿದ್ವಾನ್ ರಾಘವೇಂದ್ರಾಚಾರ್ ನಾಗರಹಳ್ಳಿ ಅವರಿಂದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಪ್ರವಚನ ಏರ್ಪಡಿಸಿದೆ. ದೂ. 2420386, ಮೊ. 9741879912 ಸಂಪರ್ಕಿಸಿ.
ಶಂಕುಸ್ಥಾಪನೆ
ಮೈಸೂರು: ಸಿದ್ದಾರ್ಥನಗರದ ವಿನಯಮಾರ್ಗದಲ್ಲಿರುವ ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರು ಅ.9ರ ಸಂಜೆ 5ಕ್ಕೆ ನೂತನ ಬ್ಲಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
ಉಚಿತ ತರಬೇತಿ
ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬ್ಯಾಂಕಿನ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ತರಬೇತಿ ತರಗತಿಗಳು ನಡೆಯಲಿದೆ. ಆಸಕ್ತರು ಅ.10 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement