ಆಟೋ ಚಾಲಕ, ವಿದ್ಯಾರ್ಥಿ ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಆಟೋ ಚಾಲಕ ಮತ್ತು ಕಾಲೇಜು ವಿದ್ಯಾರ್ಥಿ ನಾಪತ್ತೆಯಾಗಿದ್ದಾರೆ. ಜೆ.ಪಿ. ನಗರ ಬಳಿಯ ನಾಚನಹಳ್ಳಿಪಾಳ್ಯ ನಿವಾಸಿ ಲೇ. ಸಿದ್ದರಾಜು ಎಂಬವರ ಪುತ್ರ ಹಾಗೂ ಆಟೋ ಚಾಲಕ ಶಿವಕುಮಾರ್(27) ನಾಪತ್ತೆಯಾಗಿದ್ದಾರೆ. ಇವರಿಗೆ ವಿವಾಹ ನಿಶ್ಚಿಯವಾಗಿದ್ದು, ಸೆ.29ರಿಂದ ಕಾಣೆಯಾಗಿದ್ದಾರೆ. ಚಹರೆ- 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕನ್ನಡ, ಹಿಂದಿ ಮತ್ತು ಉರ್ದು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 2418322 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕೋರಿದ್ದಾರೆ.ಜಯಲಕ್ಷ್ಮಿಪುರಂ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಹಾಗೂ ಎಂ.ಪಿ. ಶಂಕರ್ ಎಂಬವರ ಪುತ್ರ ಎಂ.ಎಸ್. ಬಾಲಾಜಿ(22) ಶನಿವಾರದಿಂದ ನಾಪತ್ತೆಯಾಗಿದ್ದಾರೆ. ಚಹರೆ- 5.4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಎಡಗೈಯಲ್ಲಿ ಯುಎಸ್ ಎಂಬ ಹಚ್ಚೆ ಇದೆ. ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 2418317 ಸಂಪರ್ಕಿಸಲು ವಿಜಯನಗರ ಠಾಣೆ ಪೊಲೀಸರು ಕೋರಿದ್ದಾರೆ.