ಕೃಷಿ, ಹೈನುಗಾರಿಕೆ ಕುರಿತ ವಿಚಾರ ಸಂಕಿರಣ
ಕ.ಪ್ರ.ವಾರ್ತೆ ಹುಣಸೂರು ಅ. 8
ತಾಲೂಕಿನ ಬಿಳಿಕೆರೆ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತ ಬಾಂಧವರಿಗೆ ನಡೆದ ಕೃಷಿ ಮತ್ತು ಹೈನುಗಾರಿಕೆ ವಿಚಾರ ಸಂಕಿರಣವನ್ನು ಜಿಪಂ ಸದಸ್ಯ ಕೆ.ಎಂ. ಮಂಜು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಯೋಜನೆಯ ಕೃಷಿ ಮತ್ತು ಹೈನುಗಾರಿಕೆ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ನಿರ್ದೇಶಕ ಮಹಬಲಕುಮಾರ್ ಮಾತನಾಡಿ, ಧರ್ಮಸ್ಥಳ ಯೋಜನೆಯು ಕೃಷಿ ಮತ್ತು ಹೈನುಗಾರಿಕೆ ಯಾವ ರೀತಿ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ವಿಜ್ಞಾನಿ ಡಾ. ಎಲ್. ಅರಸು ಮಲ್ಲಯ್ಯ ಮಾತನಾಡಿ, ಕೃಷಿಯನ್ನು ಮಾಡುವ ರೀತಿ, ಯಾವ ರೀತಿ ಕೃಷಿ ಮಾಡಬೇಕು ಮತ್ತು ಪ್ರಶ್ನೆಗಳ ಮೂಲಕ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿದರು. ಡಾ. ಸಣ್ಣ ತಮ್ಮೇಗೌಡ ಅವರು ರಾಸುಗಳ ಬಗ್ಗೆ, ರೋಗಗಳ ಬಗ್ಗೆ ಆಯ್ಕೆ ಬಗ್ಗೆ, ರಾಸುಗಳನ್ನು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಚರ್ಚಿಸಿ, ಪ್ರಶ್ನಾವಳಿಗಳ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದರು.
ಬಾಲೇಂದ್ರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ದೇವಕಿ ತಿಮ್ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ತಾಲೂಕಿನ ಯೋಜನಾಧಿಕಾರಿ ಎಂ. ರಾಮು, ಸೋಮಶೇಖರ್, ದಯ ಪ್ರಸಾದ್, ದಿವಾಕರ್, ಲೆಕ್ಕ ಪರಿಶೋಧಕ ಪ್ರಶಾಂತ್, ಹರಿಣಿ, ಬಿಳಿಕೆರೆ ವಲಯದ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಭಾಗವಹಿಸಿದ್ದರು