ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆವಿಸಿ ಹೊಟೇಲ್ನಲ್ಲಿ ಬೆಂಕಿ

Rashmi Kasaragodu
Updated On : 9 Oct 2013, 12:15 pm

ಮೈಸೂರು: ನಗರದ ಕೆವಿಸಿ ಹೊಟೇಲ್ನಲ್ಲಿ ವಿದ್ಯುತ್ ಸಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು 1 ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ದೇವರಾಜ ಮೊಹಲ್ಲಾ ಕೃಷ್ಣ ವಿಲಾಸ ರಸ್ತೆಯಲ್ಲಿರುವ ಕೆವಿಸಿ ಹೊಟೇಲ್ನ 4ನೇ ಮಹಡಿಯಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಹೊಟೇಲ್ನ 4ನೇ ಮಹಡಿಯಲ್ಲಿ ಸ್ಪಾ, ರೆಸ್ಟೋರೆಂಟ್ ಮತ್ತು ಕನ್ವೇಷನಲ್ ಹಾಲ್ ಇದೆ. ಬೆಳಗ್ಗೆ 7ಕ್ಕೆ ವಿದ್ಯುತ್ ಸಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮಹಡಿ ಮೇಲೆ ಹತ್ತಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಆರಿಸಲು 1 ವಾಹನ ಸಾಲುವುದಿಲ್ಲ ಎಂದು ಹೆಚ್ಚುವರಿ ವಾಹನಗಳನ್ನು ಬರ ಮಾಡಿಕೊಂಡರು. ಒಟ್ಟು 6 ಅಗ್ನಿಶಾಮಕ ವಾಹನಗಳು ಸೇರಿ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವರು. ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಹೊಟೇಲ್ನಲ್ಲಿ ತಂಗಿದ್ದ ಪ್ರವಾಸಿಗರು ಆತಂಕಗೊಂಡು ಹೊರ ಓಡಿ ಬಂದರು. ಬೆಂಕಿ ನಂದಿಸಿದ ಬಳಿಕ ಹೊಟೇಲ್ ಪ್ರವೇಶಿಸಿದರು. 4ನೇ ಮಹಡಿಯಲ್ಲಿದ್ದ 1 ಕೋಟಿ ಮೌಲ್ಯದ ವಸ್ತುಗಳು ಸುಟ್ಟ ಭಸ್ಮವಾಗಿದೆ ಎಂದು ಕೆವಿಸಿ ಹೊಟೇಲ್ ಮಾಲೀಕ ಕೆ.ವಿ. ಚಿನ್ನಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ದೇವರಾಜ ಠಾಣೆ ಇನ್ಸ್ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement