ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪತ್ನಿ ಮೇಲಿನ ಕೋಪ ಅತ್ತಿಗೆ ಮಗನ ಕೊಲೆ

Rashmi Kasaragodu
Updated On : 9 Oct 2013, 12:12 pm

ಎಚ್.ಡಿ. ಕೋಟೆ: ತನ್ನ ಪತ್ನಿಯ ಮೇಲಿನ ಸಿಟ್ಟಿಗಾಗಿ, ಆಕೆಯ ಅಕ್ಕನ ಮಗನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಕರಿಗಳ ಬಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ. ಗ್ರಾಮದ ಮಂಜುಳಮ್ಮ ಅವರ ಪುತ್ರ ಮದನ್(6) ಕೊಲೆಯಾದ ದುರ್ದೈವಿ. ಗ್ರಾಮದ ನಂಜುಂಡೇಗೌಡರ ಪುತ್ರ ನಾರಾಯಣ(27) ಎಂಬಾತನೆ ಕೊಲೆ ಮಾಡಿದ ಆರೋಪಿ. ಮಗುವನ್ನು ಅಂಗಡಿಯಲ್ಲಿ ಬಿಸ್ಕತ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಗೃಹಿಣಿ ನಾಪತ್ತೆ
ಬೈಲುಕುಪ್ಪೆ: ಸಮೀಪದ ಬಿಲ್ಲಹಳ್ಳಿ ಗ್ರಾಮದ ರಾಜು ಎಂಬವರ ಪತ್ನಿ ರಾಣಿ(23) ತಾಲೂಕಿನ ಆವರ್ತಿ ಗ್ರಾಮದಲ್ಲಿರುವ ತನ್ನ ಅಕ್ಕ ಸಾವಿತ್ರಮ್ಮ ಮನೆಯಿಂದ ಕಾಣೆಯಾಗಿದ್ದಾರೆ.  ಚಹರೆ ಹೀಗಿದೆ ಎತ್ತರ 5.5, ಕೆಂಪು ಬಣ್ಣ, ಸಾದಾರಣ ಶರೀರ, ಇವರ ಸುಳಿವು ಸಿಕ್ಕಲ್ಲಿ 08223-254433 ಇವರನ್ನು ಸಂಪರ್ಕಿಸಬಹುದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement