33ನೇ ವಾರ್ಡ್ನಲ್ಲಿ ಅಶುಚಿತ್ವ ತಾಂಡವ
ಮೈಸೂರು: ನಗರದ ವಾರ್ಡ್ ನಂ.33 ವ್ಯಾಪ್ತಿಯ ವಿನಾಯಕನಗರದ 6ನೇ ಮುಖ್ಯರಸ್ತೆಯ ಒಂದನೇ ಕ್ರಾಸ್ನ ರಸ್ತೆ ಹಾಗೂ ಖಾಲಿ ನಿವೇಶನದಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ದೂರಿದ್ದಾರೆ. ನಿವೇಶನದ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಇರುವ ಕುಡಿಯುವ ನೀರು ಇದ್ದು, ಇಲ್ಲಿಯೆ ಹಸು-ಕರು, ಕುರಿ-ಮೇಕೆಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಜೊತೆಗೆ ಉರುವಲುಗಾಗಿ ಸೌದೆ, ಗರಿ, ಸಗಣಿ, ಬೆರಣಿಗಳನ್ನು ಈ ನಿವೇಶನಕ್ಕೆ ತಂದು ತುಂಬುತ್ತಿದ್ದಾರೆ. ಇದರಿಂದ ನೋಣ ಮತ್ತು ಸೊಳ್ಳೆಗಳ ವಾಸಸ್ಥಾನವಾಗಿದೆ ಎಂದು ಹೇಳಿದ್ದಾರೆ. ಡೆಂಘೀ ಮತ್ತು ಸೋಂಕು ರೋಗಗಳಿಗೆ ಬಲಿಯಾಗುವ ಮುನ್ನ ಸಂಬಂಧಪಟ್ಟವರು ಕೂಡಲೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.