ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು- ನಾಳೆ ನಾಟಕ, ನೃತ್ಯೋತ್ಸವ

Rashmi Kasaragodu
Updated On : 10 Oct 2013, 12:47 pm

ಮೈಸೂರು: ವಿಜಯನಗರದಲ್ಲಿರುವ ಸರ್ವೇಶ್ವರ ನೃತ್ಯಕಲಾ ಮಂದಿರದಲ್ಲಿ ಅ.10 ಮತ್ತು 11ರಂದು ಮಹಿಷಾಸುರ ಮರ್ದಿನಿ ನೃತ್ಯ ನಾಟಕ ಮತ್ತು ನೃತ್ಯೋತ್ಸವ ಏರ್ಪಡಿಸಿದ್ದು, ಅ. 10ರ ಸಂಜೆ 4ಕ್ಕೆ ನಿವೃತ್ತ ಪ್ರಾಧ್ಯಾಪಕಿ ಎಂ.ಎ. ಗಿರಿಜಮ್ಮ ಉದ್ಘಾಟಿಸುವರು. ಅ. 11ರ ಸಂಜೆ 4ಕ್ಕೆ ಕಲಾವಿದೆ ಎಂ. ಚಂದ್ರಮತಿ ನೃತ್ಯ ಪ್ರದರ್ಶಿಸುವರು.
ಫುಟ್ಬಾಲ್ ಪಂದ್ಯಾವಳಿ
ದಿ ಮೈಸೂರು ಡೈಕೋಸಿನ್ ಎಜುಕೇಷನಲ್ ಸೊಸೈಟಿಯಿಂದ ಅ.10ರಂದು ಇಲವಾಲದ ಸಂತ ಜೋಸೆಫ್ ಕೇಂದ್ರೀಯ ಶಾಲೆಯಲ್ಲಿ ನಗರ ಅಂತರ ಕಾಲೇಜುಗಳ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಿದ್ದು, ಅಂದು ಬೆಳಗ್ಗೆ 8.30ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸುವರು.
ಸಂಗೀತ ಕಚೇರಿ
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಅ.10ರ ಸಂಜೆ 7ಕ್ಕೆ ಸಾಗರ ಚಕ್ರವರ್ತಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಡುವರು.
ಇಬ್ಬರು ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಸರಸ್ವತಿಪುರಂ 5ನೇ ಮುಖ್ಯರಸ್ತೆ ನಿವಾಸಿ ಕೆ.ಆರ್.ಮಂಜುನಾಥ್ ಎಂಬವರ ಪುತ್ರಿ ಎಂ.ರಮ್ಯಾಶ್ರೀ (21) ನಾಪತ್ತೆಯಾಗಿದ್ದಾರೆ. ರಮ್ಯಾಶ್ರೀಯನ್ನು ಪ್ರೀತಿಸುತ್ತಿದ್ದ ಪ್ರವೀಣ ಎಂಬಾತನು ಕರೆದುಕೊಂಡು ಹೋಗಿದ್ದಾನೆ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕಾಣೆಯಾಗಿರುವ ಮಗಳನ್ನು ಪತ್ತೆ ಮಾಡಿಕೊಡುವಂತೆ ಮಂಜುನಾಥ್ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ.  ಸರಸ್ವತಿಪುರಂ 9ನೇ ಮುಖ್ಯರಸ್ತೆಯಲ್ಲಿರುವ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ನಿಲಿಯದಲ್ಲಿದ್ದ ಯುವರಾಜ ಕಾಲೇಜು ವಿದ್ಯಾರ್ಥಿ ಹಾಗೂ ಮರಯ್ಯ ಎಂಬವರ ಪುತ್ರ ಚಿನ್ನಸ್ವಾಮಿ(23) ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಈ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement