ಕೃಷಿ ಪ್ರೊಡ್ಯೂಸರ್ಸ್ನಿಂದ ಪ್ರತಿ ಭಾನುವಾರ ಸಾವಯವ ಸಂತೆ
ಮೈಸೂರು: ಬಾನುಲಿ ಕೃಷಿ ಪ್ರೊಡ್ಯೂಸರ್ಸ್ ಕಂಪನಿ ಲಿ. ವತಿಯಿಂದ ಪ್ರತಿ ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಸಂಸ್ಥೆಯ ಆವರಣದಲ್ಲಿ ಸಾವಯವ ಸಂತೆ ಆಯೋಜಿಸಲಾಗಿದೆ. ಸಾವಯವ ಉತ್ಪನ್ನಗಳನ್ನು ಬೆಳೆಯುತ್ತಿರುವ ಕೃಷಿಕರು ಅಂದು ನೇರವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು. ಹಾಗೆ ಪ್ರತಿ ತಿಂಗಳು ಹುಣ್ಣಿಮೆಯಂದು ಉತ್ತಮ ಆಹಾರ- ವಿಹಾರ ಕುರಿತಂತೆ ಬೆಳದಿಂಗಳ ಬಾನುಲಿ ಕೃಷಿ ಸಂವಾದ ನಂತರ ಭೋಜನ ಏರ್ಪಡಿಸಲಾಗಿದೆ. ಪ್ರತಿ ಹುಣ್ಣಿಮೆಯ(ಈ ತಿಂಗಳ 18ರಂದು) ಸಂಜೆ 7ರಿಂದ ರಾತ್ರಿ 8.30ರವರೆಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಹೆಸರು ನೋಂದಾಯಿಸಿಕೊಳ್ಳಬಹುದು. ಭೋಜನದಲ್ಲಿ ಮಲ್ನಾಡ್ ಕಷಾಯ, ರೊಟ್ಟಿ, ಚಟ್ನಿ, ನವಣೆ ಅಕ್ಕಿ ಬಾತ್, ರಾಜಮುಡಿ ಅನ್ನ, ಹುರುಳಿಕಾಳು ಸಾರು, ಪಲ್ಯ, ಕೊಪ್ಪಿನ ಪಲ್ಯ, ನವರ ಅಕ್ಕಿ ಮೊಸರನ್ನ, ಧಾರವಾಡ ಪೇಡ, ಅಮೃತ್ ಪಾನಿ ನೀಡಲಾಗುತ್ತದೆ. ಆಸಕ್ತರು ಮೊ. 94801 91936, 97411 22936 ಸಂಪರ್ಕಿಸಬಹುದು.