ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಜ್ಯದಲ್ಲಿ ಶೇ.75ರಷ್ಟು ಮಾತ್ರ ರಕ್ತ ಪೂರೈಕೆ: ಡಾ. ಮಂಜುನಾಥ್

Rashmi Kasaragodu
Updated On : 10 Oct 2013, 12:46 pm

ಮೈಸೂರು: ರಾಜ್ಯದಲ್ಲಿ ಶೇ.75ರಷ್ಟು ಜನರಿಗೆ ಮಾತ್ರ ರಕ್ತ ಪೂರೈಕೆ ಆಗುತ್ತಿದೆ. ಶೇ.25ರಷ್ಟು ಜನರಿಗೆ ವಿವಿಧ ಕಾರಣಗಳಿಂದ ರಕ್ತವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್ನ ಡಾ. ಬಿ.ಎಚ್. ಮಂಜುನಾಥ್ ಹೇಳಿದರು.
ಮೈಸೂರು ವಿವಿ ಮಾನಸಗಂಗೋತ್ರಿ ವಾಣಿಜ್ಯ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ 1200 ಜನರಿಗೆ ರಕ್ತ ಬೇಕಾಗುತ್ತಿದೆ. ಆದರೆ, ಎಲ್ಲರಿಗೂ ಸರಿಯಾದ ಸಮಯಕ್ಕೆ ರಕ್ತ ಸಿಗುತ್ತಿಲ್ಲ. ಹೀಗಾಗಿ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.
ರಕ್ತದಾನ ಶಿಬಿರ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಮಾತನಾಡಿ, ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಒಳ್ಳೆಯ ಕೆಲಸಗಳು ಮುಂದುವರೆಯಲಿ. ವಾಣಿಜ್ಯ ವಿಭಾಗ ಬೆಳವಣಿಗೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತಷ್ಟು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆರ್. ಗುರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement