ರಾಷ್ಟ್ರೀಯ ಕುಸ್ತಿ; ಸೆಮಿ ಫೈನಲ್‌ಗೆ ಕರ್ನಾಟಕ
ಮೈಸೂರು: ದಸರಾ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, ಸೆಮಿಫೈನಲ್ ಹಂತಕ್ಕೆ ತಲುಪಿದೆ. ಕುಸ್ತಿ ಪಂದ್ಯಾವಳಿಯ ಪುರುಷರ 60 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಎಂ. ನಾಗರಾಜ್- ಎಂಎಲ್‌ಐಆರ್‌ಸಿ ತಂಡದ ಸಮೀರ್ ಪಾಟೀಲ್, ಆಕಾಶ್ ಗಾಡಿ- ಮುಂಬೈನ ರಾಕೇಶ್ ಕುಮಾರ್ ಅವರು ಮುಖಾಮುಖಿ ಆಗಲಿದ್ದಾರೆ. 55 ಕೆ.ಜಿ. ವಿಭಾಗದಲ್ಲಿ ಶರವಣ್- ಜಮಾದಾರ್ ಅವರನ್ನೂ, ಕರ್ನಾಟಕದ ಕೆಂಚಪ್ಪ- ವಿನಾಯಕ ಗೌರವ್ ಅವರು ಅ.10ರಂದು ಸೆಣಸುವರು. 66 ಕೆ.ಜಿ. ವಿಭಾಗದಲ್ಲಿ ಕರ್ನಾಟಕದವರೆ ಆದ ಸತೀಶ್ ಪಾದತರೆ- ಶಿವನಾಂದ, ರಮೇಶ್ ಮಲ್ಟಿ- ಸಿದ್ದಣ್ಣ ಪಾಟೀಲ್, 74 ಕೆ.ಜಿ. ವಿಭಾಗದಲ್ಲಿ ಕಾರ್ತಿಕ್ ಕಟೆ- ಪಾಂಡುರಂಗ ಸಿಂಧೆ, ಎಲ್. ಆನಂದ್- ಎಂಇಜಿಯ ಪಾಂಡುರಂಗ ಕಂಬಾರ್, 84 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಲೋಕೇಶ್ ಯೆಲ್ಲ ಶೆಟ್ಟಿ- ಕೆಎಸ್‌ಪಿಯ ಭಾಗವಂತ್ ಬೆಳಗಿ, ಎಂಎಲ್‌ಐಆರ್‌ಸಿಯ ಸಂದೀಪ್ ಕುಮಾರ್- ಧಾರವಾಡದ ಎಸ್‌ಟಿಸಿಯ ಸಂದೀಪ್ ಕಾಟೆ ಅವರು ಮುಖಾಮುಖಿ ಆಗುವರು. ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಗೀತಾ ಮಿಶಾಲಿ- ಲಕ್ಷ್ಮೀ, ಗದಗ್‌ನ ಪ್ರೇಮ- ಧಾರವಾಡದ ಮಮತ, 51 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಶೃತಿ- ಆಳ್ವಾಸ್‌ನ ಧನಶ್ರೀ, ಗದಗನ ಶಾಹೀದ- ದೆಹಲಿಯ ಮಂಜು, 55 ಕೆ.ಜಿ. ವಿಭಾಗದಲ್ಲಿ ಮಹಾರಾಷ್ಟ್ರದ ಶ್ಯಾಮಲ- ಆಳ್ವಾಸ್‌ನ ರಂಜಿತ, ಎಸ್‌ಟಿಸಿ ಹಿಸ್ಸಾರ್‌ನ ನಿವೇದಿತ- ಆಳ್ವಾಸ್‌ನ ಸುಮೇಶ್ ಸಹ ಮುಖಾಮುಖಿ ಆಗುವರು. 59 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಪೂಜಾ- ಗದಗ್‌ನ ಜ್ಯೋತಿ ಉಪ್ಪಾರ್, ಕುರುಕ್ಷೇತ್ರದ ಸುಮೆ- ಆಳ್ವಾಸ್‌ನ ಸವಿಕ್ಕ, 63 ಕೆ.ಜಿ. ವಿಭಾಗದ ಆತ್ಮಶ್ರೀ- ಬೆಳಗಾವಿಯ ರೀತಾ ಪ್ರಿಯಾಂಕ, ಕುರುಕ್ಷೇತ್ರದ ಶಿವಾನಿ- ಆಳ್ವಾಸ್‌ನ ನಾಗರತ್ನ ಸಿದ್ದಿ, 67 ಕೆ.ಜಿ. ವಿಭಾಗದಲ್ಲಿ ಗುಜರಾತ್‌ನ ಕಟರ ಕೀರ್ತಿ- ಬೆಳಗಾವಿಯ ಐಶ್ವರ್ಯ, ಆಳ್ವಾಸ್‌ನ ಶಾಮ್ಯ- ಅಂಶ್ರೀ, 72 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ರಂಜಿತ- ಮಹಾರಾಷ್ಟ್ರದ ರೇಶ್ಮ ಅನಿಲ್ ಮನೆ, ರಮ್ಯ- ಕುರುಕ್ಷೇತ್ರದ ಇಂದು ಶರ್ಮ ಸೆಣಸುವರು.