ಸೀತಾರಾಮ ದೇವಸ್ಥಾನಕ್ಕೆ ಭಾರತಿ ಭೇಟಿ
ಮೈಸೂರು: ನಗರದ ಸೀತಾವಿಲಾಸ ರಸ್ತೆಯಲ್ಲಿರುವ ಮೂಲಮ್ನಾಯ ಕಂಚಿಕಾಮಕೋಟಿ ಸರ್ವಜ್ಞ ಪೀಠಂ ಸೀತಾರಾಮಸ್ವಾಮಿ ದೇವಸ್ಥಾನಕ್ಕೆ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಭೇಟಿ ನೀಡಿದರು.
ದೇವಸ್ಥಾನಕ್ಕೆ ಆಗಮಿಸಿದ ಭಾರತಿಯ ಅವರನ್ನು ಕಂಚಿ ಮಠ ಮೈಸೂರು ಶಾಖೆಯ ಧರ್ಮಾಧಿಕಾರಿ ಬಿ.ಎಲ್. ನಾಗೇಂದ್ರಪ್ರಸಾದ್ ಸನ್ಮಾನಿಸಿದರು. ದೇವಸ್ಥಾನದ ಚಟುವಟಿಕೆಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ನಾಗರಾಜ್, ಎಸ್. ರಂಗಸ್ವಾಮಿ, ವ್ಯವಸ್ಥಾಪಕ ಶಂಕರ ಸುಬ್ರಹ್ಮಣ್ಯ ಇದ್ದರು.
ರಘುಗೆ ಬೆಂಬಲಿಸಿ
ಕಣದಿಂದ ಹಿಂದಕ್ಕೆ
ಮೈಸೂರು: ಮೈಸೂರು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ(ಜಿಲ್ಲಾ ಹಾಪ್ಕಾಮ್ಸ್)ಗೆ ನಡೆಯುವ ಚುನಾವಣೆಯಲ್ಲಿ ಹೊಸಹುಂಡಿ ರಘು ಅವರಿಗೆ ಬೆಂಬಲಿಸಿ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪರ್ಧಾಳು ಡಿ. ನಿಜಲಿಂಗಪ್ಪ ತಿಳಿಸಿದ್ದಾರೆ. ಮೈಸೂರು ತಾಲೂಕಿನ ಮತದಾರರು ರಘು ಅವರನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡುವಂತೆ ಅವರು ಕೋರಿದ್ದಾರೆ.