ಸೀತಾರಾಮ ದೇವಸ್ಥಾನಕ್ಕೆ ಭಾರತಿ ಭೇಟಿ
ಮೈಸೂರು: ನಗರದ ಸೀತಾವಿಲಾಸ ರಸ್ತೆಯಲ್ಲಿರುವ ಮೂಲಮ್ನಾಯ ಕಂಚಿಕಾಮಕೋಟಿ ಸರ್ವಜ್ಞ ಪೀಠಂ ಸೀತಾರಾಮಸ್ವಾಮಿ ದೇವಸ್ಥಾನಕ್ಕೆ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಭೇಟಿ ನೀಡಿದರು.
ದೇವಸ್ಥಾನಕ್ಕೆ ಆಗಮಿಸಿದ ಭಾರತಿಯ ಅವರನ್ನು ಕಂಚಿ ಮಠ ಮೈಸೂರು ಶಾಖೆಯ ಧರ್ಮಾಧಿಕಾರಿ ಬಿ.ಎಲ್. ನಾಗೇಂದ್ರಪ್ರಸಾದ್ ಸನ್ಮಾನಿಸಿದರು. ದೇವಸ್ಥಾನದ ಚಟುವಟಿಕೆಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ನಾಗರಾಜ್, ಎಸ್. ರಂಗಸ್ವಾಮಿ, ವ್ಯವಸ್ಥಾಪಕ ಶಂಕರ ಸುಬ್ರಹ್ಮಣ್ಯ ಇದ್ದರು.
ರಘುಗೆ ಬೆಂಬಲಿಸಿ
ಕಣದಿಂದ ಹಿಂದಕ್ಕೆ
ಮೈಸೂರು: ಮೈಸೂರು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ(ಜಿಲ್ಲಾ ಹಾಪ್ಕಾಮ್ಸ್)ಗೆ ನಡೆಯುವ ಚುನಾವಣೆಯಲ್ಲಿ ಹೊಸಹುಂಡಿ ರಘು ಅವರಿಗೆ ಬೆಂಬಲಿಸಿ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪರ್ಧಾಳು ಡಿ. ನಿಜಲಿಂಗಪ್ಪ ತಿಳಿಸಿದ್ದಾರೆ. ಮೈಸೂರು ತಾಲೂಕಿನ ಮತದಾರರು ರಘು ಅವರನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡುವಂತೆ ಅವರು ಕೋರಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಹುಣಸೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮೈಸೂರಿನಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ನ ಎತ್ತರ ಜಿಗಿತದಲ್ಲಿ ಹುಣಸೂರಿನ ಸಂತ ಜೋಸಫರ ಪಿಯು ಕಾಲೇಜಿನ ಎಚ್.ಆರ್. ಹೇಮಂತ್ ಕುಮಾರ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಅದೇ ಕಾಲೇಜಿನ ಬಾಲಕ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದರಾದರೂ ಸಹ ಕಾಲೇಜಿನ ಕೆ. ಗೌತಮ್, ಸುಹೇಲ್ ಅಹಮದ್, ದೀಕ್ಷಿತ್, ಟಿ. ಸೌಮ್ಯರಾಣಿ, ಸಂಧ್ಯಾ ಅವರು ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರತಿನಿಧಿಸುವರೆಂದು ಕಾಲೇಜಿನ ಪ್ರಾಂಶುಪಾಲೆ ಎಮಿಲಿ ಡಿ ಸೋಜಾ ತಿಳಿಸಿದ್ದು, ಕ್ರೀಡಾಪಟುಗಳನ್ನು ಪ್ರಾಧ್ಯಾಪಕ ನಂಜುಂಡಸ್ವಾಮಿ ಅಭಿನಂದಿಸಿದ್ದಾರೆ.