ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಜೆಎಸ್ಎಸ್ ವಿವಿ ಘಟಿಕೋತ್ಸವ

Rashmi Kasaragodu
Updated On : 10 Oct 2013, 11:36 am

ಕ.ಪ್ರ.ವಾರ್ತೆ   ಮೈಸೂರು   ಅ. 10
ಜೆಎಸ್ಎಸ್ ವಿಶ್ವವಿದ್ಯಾನಿಲಯದ ನಾಲ್ಕನೇ ಘಟಿಕೋತ್ಸವ ಅ.12ರ ಬೆಳಗ್ಗೆ 11ಕ್ಕೆ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ನಡೆಯಲಿದೆ.
ವಿವಿಯ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ತಿರುಮಲಾಚಾರಿ ರಾಮಸ್ವಾಮಿ ಘಟಿಕೋತ್ಸವ ಭಾಷಣ ಮಾಡುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್ ಭಾಗವಹಿಸುವರು ಎಂದು ಕುಲಪತಿ ಡಾ. ಬಿ. ಸುರೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19 ಮಂದಿ ಪಿಎಚ್ಡಿ ಪದವಿ, 56 ಮಂದಿಗೆ ಫ್ಯಾಕಲ್ಟಿ ಮೆಡಿಷನ್(ಎಂಡಿ, ಎಂಎಸ್)ನಲ್ಲಿ ಸ್ನಾತಕೋತ್ತರ ಪದವಿ, 25 ಮಂದಿಗೆ ಡಿಪ್ಲೊಮಾ ಇನ್ ಫ್ಯಾಕಲ್ಟಿ ಮೆಡಿಷನ್, 25 ಮಂದಿಗೆ ಡಿಪ್ಲೊಮಾ ಇನ್ ಫ್ಯಾಕಲ್ಟಿ ಮೆಡಿಷನ್, 222 ಮಂದಿಗೆ ಫ್ಯಾಕಲ್ಟಿ ಆಫ್ ಫಾರ್ಮಸಿ ಸೇರಿದಂತೆ 490 ಮಂದಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಪೈಕಿ ಪೆಥಾಲಜಿ(ಎಂಡಿ) ವಿಭಾಗದಲ್ಲಿ ಡಾ. ವಿ. ದಿವ್ಯಾ, ಜನರಲ್ ಮೆಡಿಷನ್(ಎಂಡಿ) ವಿಭಾಗದಲ್ಲಿ ಡಾ. ಎಂ. ಇಸ್ಮಾಯಿಲ್ ಖಾನ್, ಪೆಡಿಯಾಟ್ರಿಕ್(ಎಂಡಿ) ವಿಭಾಗದಲ್ಲಿ ಡಾ. ವೈ.ಎಲ್. ಶಿವಮೂರ್ತಿ, ಡಿಪ್ಲೊಮಾ ಇನ್ ಅನಸ್ತೇಸಿಯಾಲಜಿಯಲ್ಲಿ ಡಾ. ಎಸ್.ಎನ್. ಭಗೀರತ್, ಅರ್ಥೋಡೊಂಟಿಕ್ಸ್ ಆ್ಯಂಡ್ ಡೆಂಟೊಫೆಸಿಯಲ್ ಅರ್ಥೋಪೆಡಿಕ್ಸ್ನಲ್ಲಿ ಎಂಡಿಎಸ್ ಮಾಡಿದ ಡಾ. ಅಂಕುರ್ ಅಗರವಾಲ್, ಬಿಡಿಎಸ್ ವಿಭಾಗದಲ್ಲಿ ಡಾ. ಹಾರ್ಡ್ವಿಕ್ ಮಕ್ಕರ್, ಎಂ. ಫಾರ್ಮಾದಲ್ಲಿ ಶಿಲ್ಪಿ ಖಟ್ರಿ ಮತ್ತು ಬಿ. ಫಾರ್ಮಾದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜೆನಿಶಾ ಕರ್ಮಾಚಾರ್ಯ ಅವರು ತಲಾ 2 ಚಿನ್ನದ ಪದಕ ಪಡೆದಿದ್ದಾರೆ.
ವಿವಿ ವತಿಯಿಂದ ಮುಂದಿನ ದಿನಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ಚರ್ಮರೋಗ ಮತ್ತು ಮಾನಸಿಕ ರೋಗಗಳ ತಡೆಗಟ್ಟುವಿಕೆಗೆ ವಿಶೇಷ ಗಮನ ಮತ್ತು ಸಂಶೋಧನೆ ನಡೆಸಲು ಮುಂದಾಗುವುದಾಗಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಬಸವನಗೌಡಪ್ಪ ಹೇಳಿದರು. ಕುಲಸಚಿವರಾದ ಡಾ. ಆರ್. ವಿಜಯಸಿಂಹ, ಡಾ. ಮಂಜುನಾಥ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement