'ಆಧುನೀಕತೆ ಬೆಳೆದಂತೆ ರೋಗ ಹೆಚ್ಚಳ'
ಪಿರಿಯಾಪಟ್ಟಣ: ಆಧುನಿಕತೆ ಬೆಳೆದಂತೆ ರೋಗಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ತ್ರಿವೇಣಿ ಹೇಳಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯ ವಾಜಪೇಯಿ ಆರೋಗ್ಯಶ್ರೀ, ಆರೋಗ್ಯ ಮಿತ್ರ ಕೌಂಟರ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಆರೋಗ್ಯವೆಂಬುದು ಮುಖ್ಯವಾಗಿದ್ದು, ದೈನಂದಿನ ಚಟುವಟಿಕೆಗಳ ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು.
ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮ ಯೋಜನೆಯಡಿ 7 ವಿವಿಧ ರೋಗಗಳಿಗೆ ಸಂಬಂಧಪಟ್ಟಂತೆ ಬಿಪಿಎಲ್ ಕಾರ್ಡ್ ಹೊಂದಿದವರು ಇದರ ಪ್ರಯೋಜನ ಹೊಂದಬಹುದಾಗಿದ್ದು, 1.5 ಲಕ್ಷದವರೆಗೆ ವೆಚ್ಚವನ್ನು ಈ ಯೋಜನೆಯಡಿ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಡಾ. ಸದಾಶಿವ, ಡಾ. ಮಹದೇವ್ಸ್ವಾಮಿ, ಡಾ. ಪ್ರಕಾಶ್ ನಾಯಕ್, ನೇತ್ರ ತಜ್ಞ ನಿಂಗೇಗೌಡ, ಶಿಶ್ರೂಕಿಯರಾದ ಸರಸ್ವತಿ, ಭವಾನಿ, ವಾಜಪೇ ಆರೋಗ್ಯಶ್ರೀ ಸಂಯೋಜಕ ನಿರಂಜನ್ಕುಮಾರ್ ಇದ್ದರು.