ಕಾರ್ಮಿಕರು ದುಶ್ಚಟಕ್ಕೆ ಬಲಿಯಾಗಬಾರದು
ಪಿರಿಯಾಪಟ್ಟಣ: ಪೌರ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಿದೆ, ಬರುವ ಆದಾಯವನ್ನು ಕುಟುಂಬದ ರಕ್ಷಣೆ ಹಾಗೂ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ತಹಸೀಲ್ದಾರ್ ಎಂ.ಕೆ. ಸವಿತಾ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ತಾವು ಎಷ್ಟೇ ದುಡಿದರೂ ಅವರ ಆರೋಗ್ಯ ಮತ್ತು ತಮ್ಮ ಮಕ್ಕಳ ಶಿಕ್ಷಣದತ್ತ ಗಮನ ಹರಿಸುವಲ್ಲಿ ವಿಫಲರಾಗುತ್ತಿದ್ದಾರೆ ಇದು ನಿಲ್ಲಬೇಕು ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಪಂಕಜಾರೆಡ್ಡಿ, ಪಪಂ ಸದಸ್ಯರಾದ ವೇಣುಗೋಪಾಲ್, ಅಬ್ದುಲ್ ಅಜೀಜ್, ಅನಿತಾಶೇಖರ್, ಸೌಭಾಗ್ಯ, ನಾಗರತ್ನ, ಸುವರ್ಣಮ್ಮ, ಸಣ್ಣಪ್ಪ, ತನುಜಾ, ಮಾಜಿ ಸದಸ್ಯರಾದ ಶ್ರೀನಿವಾಸ್, ಕಲಾಮಣಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಜಯರಾಂ ಪದಾಧಿಕಾರಿಗಳಾದ ಪಳನಿ, ಕುಮಾರ್, ಜಯರಾಂ, ಮಧು, ರಾಜು, ಮಂಜು, ಅಬ್ದುಲ್, ಪುಟ್ಟಮ್ಮ, ಶಕೀಲ್, ಮಹದೇವ್ ಇದ್ದರು.