ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೂರ್ಣಯ್ಯ ನಾಲೆ ಒತ್ತುವರಿ; ಡಿಸಿಗೆ ಸೂಚನೆ

Rashmi Kasaragodu
Updated On : 12 Oct 2013, 12:08 pm

ಮೈಸೂರು: ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಸುತ್ತಿದ್ದ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ಕುರಿತು ವರದಿ ನೀಡುವಂತೆ ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ಹಾಗೂ ಉಪ ಸಭಾಪತಿ ಶಿವಶಂಕರ ರೆಡ್ಡಿ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ಣಯ್ಯ ನಾಲೆ ಒತ್ತುವರಿ ಕುರಿತು ವರದಿ ನೀಡಬೇಕು. ಅಂತೆಯೆ ಕೆರೆಗೆ ಸೇರುತ್ತಿರುವ ಮಲಿನ ನೀರನ್ನು ಎಚ್.ಡಿ. ಕೋಟೆ ತಾಲೂಕಿನ ರಾಯನಕೆರೆ ನೀರು ಶುದ್ಧೀಕರಣ ಘಟಕಕ್ಕೆ ಪೈಪ್ಲೈನ್ ಮೂಲಕ ವರ್ಗಾಯಿಸುವ ಕಾಮಗಾರಿಗೆ ಕೂಡಲೆ ಚಾಲನೆ ನೀಡಬೇಕು. ನಾಲೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿರುವವರ ವಿರುದ್ಧ ಪಾಲಿಕೆ ಯಾವುದೆ ಕ್ರಮಕೈಗೊಂಡಿಲ್ಲ. ಅಲ್ಲದೆ ನಾಲೆಯ ಕೆಲಭಾಗದಲ್ಲಿ ಎಂಡಿಎ ಬಡಾವಣೆ ನಿರ್ಮಿಸಿ ಜನರಿಗೆ ಹಂಚಿಕೆ ಮಾಡಿರುವುದರಿಂದ ಪರ್ಯಾಯ ಮಾರ್ಗದ ಬಗ್ಗೆ ಅಧಿಕಾರಿಗಳು ಸಲಹೆ ನೀಡುವಂತೆ ತಿಳಿಸಿದರು.
ಮೈಸೂರು ವಿವಿ ಆವರಣದಲ್ಲಿ ಮಳೆ ನೀರು ಸಂಗ್ರಹದ ಮೂಲಕ ನೀರು ಪೂರೈಕೆ ಮಾಡಬಹುದು ಹಾಗೂ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಸುಮಾರು 10 ಲಕ್ಷ ಲೀ. ಬ್ಯಾಕ್ವಾಶ್ ನೀರನ್ನು ಕೆರೆಗೆ ಬಿಡಿಸಬಹುದು ಎಂಬ ಸಲಹೆ ಬಂದಿದೆ. ಅದರಂತೆ ಕ್ರಮ ಕೈಗೊಳ್ಳಬಹುದು. ಕೆರೆಗೆ ಸೇರುತ್ತಿರುವ ಪಡುವಾರಹಳ್ಳಿ ಹಾಗೂ ಸಿಎಫ್ಟಿಆರ್ಐನ ಮಲಿನ ನೀರನ್ನು 2 ಕೋಟಿ ವೆಚ್ಚದಲ್ಲಿ 2,997 ಮೀ. ಉದ್ದದ ಒಳಚರಂಡಿ ಕಾಮಗಾರಿ ಕೈಗೊಳ್ಳುವ ಮೂಲಕ ಬೋಗಾದಿ ರಸ್ತೆಯ ಒಳಚರಂಡಿಗೆ ವರ್ಗಾಹಿಸಲಾಗುವುದು. ಆ ಮೂಲಕ ಎಚ್.ಡಿ. ಕೋಟೆಯ ರಾಯನಕೆರೆ ಮಲಿನ ನೀರು ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಿ ದಳವಾಯಿಕೆರೆಗೆ ಬಿಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement